ಹಾವೇರಿ: ಈಜಲು ತೆರಳಿದ್ದ ಇಬ್ಬರು ಬಾಲಕರು ನದಿ ನೀರು ಪಾಲಾದ ಘಟನೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಬಳಿ ನಡೆದಿದೆ. ಮೃತ ಬಾಲಕರನ್ನ ನಿಖಿಲ್ ಕಿಲಾರಿ (14 ವರ್ಷ) ಮತ್ತು ಸಂಜಯ ಚಳಗೇರಿ (14) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ನಿಖಿಲ್ ಮೃತದೇಹ ಹೊರತೆಗೆದಿದ್ದಾರೆ. ಸಂಜಯ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಿದ್ದಾರೆ.
ಐದಾರು ಗೆಳೆಯರು ಸೇರಿಕೊಂಡು ನದಿಗೆ ಈಜಲು ತೆರಳಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂಬುದು ತಿಳಿದುಬಂದಿದೆ. ಇಬ್ಬರು ನೀರಲ್ಲಿ ಮುಳುಗುತ್ತಿದ್ದಂತೆ ಉಳಿದವರು ಓಡಿ ಬಂದು ಮನೆಯವರಿಗೆ ವಿಷಯ ತಿಳಿಸಿದ್ದಾರೆ. ಹಿರೇಕೆರೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಓದಿ: ಚಿಕ್ಕೋಡಿ: ಭಿಕ್ಷುಕಿಯೊಂದಿಗೆ ಅಸಭ್ಯ ವರ್ತನೆ, ಶಿಕ್ಷಕನಿಗೆ ಧರ್ಮದೇಟು!