ಹಾವೇರಿ: ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ವೃದ್ಧೆಯನ್ನು ಸ್ಥಳೀಯರೇ ರಕ್ಷಿಸಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ.
ಅನ್ನಪೂರ್ಣ ಗಾಯಗೊಂಡು ಅಸ್ವಸ್ಥಗೊಂಡವರು. ಅಬ್ದುಲ್ ಖಾದರ್ ಎಂಬವರು ಅನ್ನಪೂರ್ಣರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದೊರಕುವಂತೆ ಮಾಡಿದ್ದಾರೆ.
ಅನ್ನಪೂರ್ಣ ರೈಲಿನಲ್ಲಿ ಪಯಣಿಸುತ್ತಿದ್ದ ವೇಳೆ ಆಯತಪ್ಪಿ ಬಿದ್ದು ಗಾಯಗೊಂಡಿರಬಹುದು ಎಂದು ಶಂಕಿಸಲಾಗಿತ್ತು. ಬಳಿಕ ಪ್ರಜ್ಞೆ ತಪ್ಪಿರುವುದು ಬೆಳಕಿಗೆ ಬಂದಿದೆ.
ಅನ್ನಪೂರ್ಣ ಬಳಿಯಿದ್ದ ಬಂಗಾರದ ವಸ್ತುಗಳನ್ನು ಕಂಡ ಪೊಲೀಸರು, ಅವುಗಳನ್ನ ಸ್ಥಳೀಯರಿಗೆ ಒಪ್ಪಿಸಿದ್ದಾರೆ. ಮೈಮೇಲೆ ಬಂಗಾರವಿದ್ದರೇ ಕಳ್ಳತನ ಆಗಬಹುದು ಎಂಬ ಮುಂಜಾಗೃತೆಯಿಂದ ಅಬ್ದುಲ್ ಖಾದರ್‌ಗೆ ಒಪ್ಪಿಸಿದ್ದಾರೆ. ಹಾವೇರಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಹಿಳೆಗೆ ತನ್ನ ಹೆಸರು ಬಿಟ್ಟು ಯಾವುದು ನೆನಪಿಗೆ ಬರುತ್ತಿಲ್ಲ. ಅನ್ನಪೂರ್ಣ ಅವರನ್ನ ಸಂಬಂಧಿಕರು ಗುರುತಿಸಿದರೇ ಅಥವಾ ಮಹಿಳೆಗೆ ಪ್ರಜ್ಞೆ ಬಂದರೆ ಮನೆ ಸೇರಿಸುವ ಇಂಗಿತವನ್ನು ಅಬ್ದುಲ್ ಖಾದರ್ ವ್ಯಕ್ತಪಡಿಸಿದ್ದಾರೆ.