ಹಾವೇರಿ: ಕೇಂದ್ರ ಸರ್ಕಾರ ಸಂಚಾರಿ ನಿಯಮಗಳನ್ನು ಎಲ್ಲರು ಕಟ್ಟುನಿಟ್ಟಾಗಿ ಪಾಲನೆ ಮಾಡಲಿ ಎಂಬ ಉದ್ದೇಶದಿಂದ ಮೋಟಾರು ವಾಹನ ಕಾಯ್ದೆ 2019 ಜಾರಿಗೆ ತಂದಿದೆ. ಆದ್ರೆ ಏಲಕ್ಕಿ ನಾಡಿನ ಜನಕ್ಕೆ ಇದು ಅನ್ವಯವಾದಂತೆ ಕಾಣುತ್ತಿಲ್ಲ.
ಹೌದು, ಜಿಲ್ಲೆಯಲ್ಲಿ ಶನಿವಾರವೇ ಈ ರೂಲ್ಸ್ ಜಾರಿಗೆ ತರಲಾಗಿತ್ತು. ಆದರೆ ವಾಹನ ಸವಾರರು ಇದಕ್ಕೆ ಕ್ಯಾರೆ ಎನ್ನದೆ ಎಂದಿನಂತೆ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುತ್ತಿದ್ದಾರೆ. ಬೈಕ್ನಲ್ಲಿ ತ್ರಿಬಲ್ ರೈಡಿಂಗ್ ಸೇರಿದಂತೆ ನಗರದ ವಿವಿಧೆಡೆ ಸಂಚಾರಿ ನಿಯಮ ಉಲ್ಲಂಘನೆಯಾಗುತ್ತಿದೆ.
ಈಗಾಗಲೇ ಪೊಲೀಸ್ ಇಲಾಖೆ ಭಾರಿ ದಂಡ ಕುರಿತಂತೆ ಸಾರ್ವಜನಿಕರಲ್ಲಿ ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಿತ್ತು. ಆದರೂ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಬದಲಾವಣೆಯಾಗಿಲ್ಲ. ಪೊಲೀಸ್ ಇಲಾಖೆ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಮೋಟಾರು ವಾಹನ ಕಾಯ್ದೆ 2019 ಬಗ್ಗೆ ಅರಿವು ಮೂಡಸಬೇಕು ಎನ್ನುತ್ತಿದ್ದಾರೆ ಸಾರ್ವಜನಿಕರು.