ETV Bharat / state

'ಊಟಕ್ಕೆ ದುಡ್ಡಿಲ್ಲ, ದಂಡ ಹೇಗ್​​​ ಕಟ್ಲಿ ಸರ್': ಪೊಲೀಸರಲ್ಲಿ ಸವಾರನ ಮನವಿ - ರಾಣೆಬೆನ್ನೂರು ಟ್ರಾಫಿಕ್​ ಪೊಲೀಸರ ವೈರಲ್​ ವಿಡಿಯೋ

ಲಾಕ್​​ಡೌನ್​​ ಇದ್ರೂ ಸುಖಾಸುಮ್ಮನೆ ಓಡಾಡ್ತಿದ್ದ ಯುವಕರಿಗೆ ಪೊಲೀಸರು ದಂಡ ಹಾಕಿದ್ದಾರೆ. ಪೊಲೀಸರ ಜತೆ ವಾಗ್ವಾದಕ್ಕಿಳಿದ ಯುವಕರು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

traffic police and  motorist viral video
ವಾಹನ ಸವಾರರಿಗೆ ದಂಡ
author img

By

Published : Apr 4, 2020, 10:55 AM IST

ರಾಣೆಬೆನ್ನೂರು/ಹಾವೇರಿ: ಅನಾವಶ್ಯಕವಾಗಿ ಸಂಚಾರ ಮಾಡುತ್ತಿದ್ದ ಬೈಕ್ ಸವಾರನಿಗೆ ದಂಡ ಹಾಕಿದ ಹಿನ್ನೆಲೆ ಪೊಲೀಸರ ಜತೆ ವಾಗ್ವಾದ ನಡೆಸಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ರಾಣೆಬೆನ್ನೂರು ನಗರದಲ್ಲಿ ನಡೆದಿದೆ.

ವಾಹನ ಸವಾರರಿಗೆ ದಂಡ

ಕೊರೊನಾ ಲಾಕಡೌನ್ ಹಿನ್ನೆಲೆಯಲ್ಲಿ ಪೋಲಿಸರು ಎಲ್ಲಾ ವಾಹನಗಳನ್ನು ನಿಷೇಧ ಮಾಡಿದ್ದಾರೆ. ಈ ನಡುವೆ ಹಲಗೇರಿ ವೃತ್ತದಲ್ಲಿ ಇಬ್ಬರು ಯುವಕರು ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಸಮಯದಲ್ಲಿ ಪೊಲೀಸರು ತಡೆದು 5 ಸಾವಿರ ದಂಡ ಹಾಕಿದ್ದಾರೆ. ಇದನ್ನು ಯುವಕರು ‌ಪ್ರಶ್ನಿಸಿದಾಗ ಪೊಲೀಸರು-ಯುವಕರ ನಡುವೆ ಮಾತಿಗೆ ಮಾತು ಬೆಳೆದಿದೆ.

ಈ ಸಮಯದಲ್ಲಿ ಬೈಕ್ ಸವಾರ ನಮಗೆ ಊಟಕ್ಕೆ ದುಡ್ಡಿಲ್ಲ, ನಿಮಗೆ ಹೇಗೆ ದುಡ್ಡು ಕೊಡೋದು ಎಂದು ಪ್ರಶ್ನೆ ಮಾಡಿದ್ದಾನೆ. ಇದೇ ವೇಳೆ ವಾಹನ ಸವಾರ ಪೊಲೀಸರ ಜತೆ ವಾಗ್ವಾದ ನಡೆಸುತ್ತಿರುವ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ವಿಡಿಯೋ ವೈರಲ್ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.