ETV Bharat / state

ಆರ್ಥಿಕವಾಗಿ ಸದೃಢರಾಗಿರುವವರು ಬಿಪಿಎಲ್ ಕಾರ್ಡ್‌ ಮರಳಿಸಿ: ತಹಶೀಲ್ದಾರ್

ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಬಡವರ ಅನುಕೂಲಕ್ಕಾಗಿ ಬಿಪಿಎಲ್ ಪಡಿತರ ಚೀಟಿಯನ್ನು ನೀಡಿದೆ. ಆರ್ಥಿಕವಾಗಿ ಸದೃಢರಾಗಿರುವ ವ್ಯಕ್ತಿಗಳು ಇದರ ಅನುಕೂಲ ಪಡೆಯುತಿದ್ದರೆ ಕೂಡಲೇ ವಾಪಸ್‌ ನೀಡಬೇಕೆಂದು ತಹಶೀಲ್ದಾರ್ ಎರ್ರಿಸ್ವಾಮಿ ತಿಳಿಸಿದ್ದಾರೆ.

author img

By

Published : Jun 13, 2020, 12:36 PM IST

ಎರ್ರಿಸ್ವಾಮಿ
ಎರ್ರಿಸ್ವಾಮಿ

ಹಾನಗಲ್: ಸರ್ಕಾರ ಬಡತನ ರೇಖೆಗಿಂತ ಕೆಳಗಿರುವ ಬಡವರ ಅನುಕೂಲಕ್ಕಾಗಿ ಬಿಪಿಎಲ್ ಪಡಿತರ ಚೀಟಿಯನ್ನು ನೀಡಿದ್ದು, ಆರ್ಥಿಕವಾಗಿ ಸದೃಢರಾಗಿರುವ ವ್ಯಕ್ತಿಗಳು ಇದರ ಅನುಕೂಲ ಪಡೆಯುತಿದ್ದರೆ ಕೂಡಲೇ ವಾಪಸ್‌ ನೀಡಬೇಕೆಂದು ತಹಶೀಲ್ದಾರ್ ಎರ್ರಿಸ್ವಾಮಿ ತಿಳಿಸಿದ್ದಾರೆ.

ಪಡಿತರ ಚೀಟಿಯ ಸೌಲಭ್ಯವನ್ನು ಬಡವರಿಗಾಗಿ ನೀಡಿದ್ದು, ಆರ್ಥಿಕವಾಗಿ ಸದೃಢರಾಗಿರುವ ವ್ಯಕ್ತಿಗಳು ಪಡೆಯುತಿದ್ದರೆ ಕೂಡಲೇ ಒಂದು ವಾರದೊಳಗೆ ಸಂಬಂಧಪಟ್ಟ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಗೆ ಮರಳಿಸಿ ಅಮಾನ್ಯಗೊಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಇಂತಹ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಕೇಸ್ ದಾಖಲಿಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಹಶೀಲ್ದಾರ್ ಎರ್ರಿಸ್ವಾಮಿ ಎಚ್ಚರಿಕೆ ನೀಡಿದರು.

ಈಗಾಗಲೇ ತಾಲೂಕಿನಲ್ಲಿ ಕೆಲ ಸರ್ಕಾರಿ ನೌಕರರು ಬಿಪಿಎಲ್ ಕಾರ್ಡ್ ಹೊಂದಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ ಎಂದು ಅವರು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.