ಹಾವೇರಿ: ಬಿಜೆಪಿಯವರು ಬರೀ ಬ್ಲಾಕ್ಮೇಲ್ ಗಿರಾಕಿಗಳು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎಚ್. ವಿಶ್ವನಾಥ್, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪ್ರಶ್ನೆ ಅಲ್ಲ. ನಮ್ಮ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಅನ್ನೋದಷ್ಟೇ ಇಲ್ಲಿರುವ ಪ್ರಶ್ನೆ ಎಂದರು.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ನಮ್ಮ ಸೀನಿಯರ್ ಲೀಡರ್ ಇದ್ದಾರೆ. ನಮ್ಮ ನಾಯಕರು, ಸಮಾಜದ ಮುಖಂಡರಲ್ಲಿ ಅವರೂ ಒಬ್ಬರಿದ್ದಾರೆ. ಎಸ್ಟಿ ಹೋರಾಟಕ್ಕೆ ವಿರೋಧವಿಲ್ಲ ಅನ್ನೋರು, ಇದೆಲ್ಲ ಯಾಕೆ ಮಾತಾಡಬೇಕು. ವಿರೋಧವಿಲ್ಲ, ಏನ್ ಬೇಕು ಮಾಡ್ರಪ್ಪ ಅನ್ನಬೇಕು ಎಂದರು.
ಇದನ್ನೂ ಓದಿ:ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿಗೆ ಆಗ್ರಹಿಸಿ ಇಂದಿನಿಂದ ಪಾದಯಾತ್ರೆ