ETV Bharat / state

ಹಾವೇರಿ: ಮೇದಾರ ಸಮುದಾಯದವರಿಂದ ಐಫೆಲ್​ ಟವರ್ ನಿರ್ಮಾಣ

ಹಾವೇರಿ ಜಿಲ್ಲೆ ರಾಣೆಬೆನ್ನೂರು ಪಟ್ಟಣದ ಮೇದಾರ ಸಮುದಾಯದವರು ಐಫೆಲ್​ ಟವರ್ ಮಾದರಿಯ ಟವರ್ ನಿರ್ಮಿಸಿದ್ದಾರೆ.

ಹಾವೇರಿಯಲ್ಲಿ ಐಫೆಲ್​ ಟವರ್​ ನಿರ್ಮಾಣ
ಹಾವೇರಿಯಲ್ಲಿ ಐಫೆಲ್​ ಟವರ್​ ನಿರ್ಮಾಣ
author img

By ETV Bharat Karnataka Team

Published : Sep 29, 2023, 10:55 PM IST

ಸಮಿತಿಯ ಸದಸ್ಯ ಶಿವಲಿಂಗಪ್ಪ ಅವರು ಐಫೆಲ್​ ಟವರ್ ನಿರ್ಮಾಣದ ಬಗ್ಗೆ ಮಾತನಾಡಿದ್ದಾರೆ

ಹಾವೇರಿ: ಐಫೆಲ್ ಟವರ್​ ಯಾರಿಗೆ ತಾನೆ ಗೊತ್ತಿಲ್ಲ. ಪ್ರಾನ್ಸ್ ದೇಶದ ಫ್ಯಾರಿಸ್‌ ನಗರದಲ್ಲಿರುವ ಐಫೆಲ್ ಟವರ್ ವಿಶ್ವದ ಪ್ರಮುಖ 10 ಟವರ್‌ಗಳಲ್ಲಿ ಒಂದು. ಈ ಟವರ್‌ನ್ನ ನಮ್ಮ ಗಣೇಶ ಚತುರ್ಥಿ ಹಬ್ಬದಲ್ಲಿ ಭಕ್ತರ ಆಕರ್ಷಣೆಗೆ ನಿರ್ಮಿಸಿದರೆ ಹೇಗೆ ಇರುತ್ತೆ. ಇಂತಹದ್ದೊಂದು ಸಾಹಸಕ್ಕೆ ಮುಂದಾಗಿದೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ಪಟ್ಟಣದ ಮೇದಾರ ಸಮುದಾಯ.

ಮೇದಾರ ಸಮುದಾಯದವರು ಬಿದಿರು, ಚಾಪೆ ಸೇರಿದಂತೆ ವಿವಿಧ ವಸ್ತುಗಳನ್ನ ನಿತ್ಯ ಮಾರಾಟ ಮಾಡುತ್ತಾರೆ. ತಾವು ತಯಾರಿಸುವ ವಸ್ತುಗಳಿಂದ ಫ್ಯಾರಿಸ್‌ನ ಐಫೆಲ್ ಟವರ್ ನಿರ್ಮಿಸಿದ್ದಾರೆ. ಚಾಪೆ, ಬಿದಿರು ಬೊಂಬು ಸೇರಿದಂತೆ ತಾವು ಬಳಸುವ ವಸ್ತುಗಳಿಂದ ಸುಮಾರು 75 ಅಡಿ ಎತ್ತರದಷ್ಟು ಐಫೆಲ್ ಟವರ್ ಮಾದರಿಯ ಟವರ್ ನಿರ್ಮಿಸಿದ್ದಾರೆ.

ಸುಮಾರು 35ಕ್ಕೂ ಅಧಿಕ ಯುವಕರು ಸೇರಿ ಈ ಟವರ್ ನಿರ್ಮಿಸಿದ್ದಾರೆ. ಮೇದಾರ ಸಮುದಾಯದ ಯುವಕರು ಸೇರಿಕೊಂಡು ತಾವೇ ತಮ್ಮ ಅಳತೆಯ ಪ್ರಮಾಣದ ಮೇಲೆ ಐಫೆಲ್ ಟವರ್ ತಯಾರಿಸಿದ್ದಾರೆ. ಈ ಬಿದಿರು ಚಾಪೆಯಿಂದ ತಯಾರಿಸಲ್ಪಟ್ಟ ಐಫೆಲ್ ಟವರ್‌ಗೆ ವಿದ್ಯುತ್​ದೀಪಾಲಂಕರ ಮಾಡಿದ್ದು, ರಾತ್ರಿ ವೇಳೆ ಕಣ್ಮನ ಸೆಳೆಯುತ್ತೆ. ಜಗಮಗಿಸುವ ವಿದ್ಯುತ್ ದೀಪಗಳ ಅಲಂಕಾರದಲ್ಲಿ ಕೀ. ಮಿ ದೂರದವರೆಗೆ ಐಫೆಲ್ ಟವರ್ ಕಾಣುತ್ತದೆ.

ಮೇದಾರ ಸಮುದಾಯದವರು ಸುಮಾರು 44 ವರ್ಷಗಳಿಂದ ಸಾರ್ವಜನಿಕವಾಗಿ ಗಣೇಶ ಸ್ಥಾಪನೆ ಮಾಡುತ್ತ ಬಂದಿದ್ದಾರೆ. ಒಂದಿಲ್ಲ ಒಂದು ರೀತಿಯ ಆಕರ್ಷಣೀಯವಾಗಿ ಗಣಪತಿ ಡೆಕೋರೇಶನ್ ಮಾಡುವುದು ಇವರ ಹವ್ಯಾಸ. ಹಲವು ವರ್ಷಗಳಿಂದ ವಿವಿಧ ರೀತಿಯ ಅಲಂಕಾರದಿಂದ ಗಣೇಶನ ಅಲಂಕಾರ ಮಾಡುತ್ತಾ ಬಂದಿದ್ದಾರೆ.

ಕಳೆದ ಎರಡು ವರ್ಷ ಕೊರೊನಾ ಕರಿನೆರಳಿನಿಂದ ಗಣಪತಿಗೆ ಹೆಚ್ಚಿನ ಡೆಕೋರೇಶನ್ ಮಾಡಲು ಆಗಿರಲಿಲ್ಲ. ಈ ವರ್ಷ ಒಳ್ಳೆಯ ವಾತಾವರಣವಿದೆ. ಹೀಗಾಗಿ ಬೊಂಬು ಬಿದಿರು ಚಾಪೆಗಳಿಂದ ಐಫೆಲ್ ಟವರ್ ರಚಿಸಿದ್ದೇವೆ. ಈ ಟವರ್ ನೋಡಲು ದೂರದ ಬೀದರ್​, ಗುಲ್ಬುರ್ಗಾ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿದೆಡೆ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಐಫಲ್ ಟವರ್ ನೋಡಿ ಸಂಭ್ರಮಿಸುತ್ತಿದ್ದಾರೆ. ಇದಕ್ಕಿಂತ ಬೇರೆ ಸಂತೋಷವಿಲ್ಲ ಎನ್ನುತ್ತಾರೆ ಮೇದಾರ ಯುವಕರು. ತಾವು ಈ ರೀತಿ ಟವರ್ ಮಾಡಿದ್ದು ಸಾರ್ಥಕವಾಯಿತು ಎಂದು ಬೀಗುತ್ತಾರೆ ಮೇದಾರ ಯುವಕರು.

ಐಫೆಲ್ ಟವರ್‌ನ ನೆಲಮಹಡಿಯಲ್ಲಿ ಬೃಹತ್ ಗಣೇಶ ಮೂರ್ತಿ ಸ್ಥಾಪಿಸಲಾಗಿದೆ. ದೂರದಿಂದ ಐಫೆಲ್ ಟವರ್ ಸೌಂದರ್ಯಕ್ಕೆ ಮನಸೋಲುವ ಭಕ್ತರು ಹತ್ತಿರ ಬಂದು ಗಣೇಶ ದರ್ಶನ ಪಡೆಯುತ್ತಿದ್ದಾರೆ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಅಧಿಕವಾಗುತ್ತಿದೆ. ಭಕ್ತರ ಈ ರೀತಿಯ ಪ್ರೋತ್ಸಾಹ ನೋಡಿದರೆ ಮುಂದಿನ ವರ್ಷಗಳಲ್ಲಿ ಇನ್ನು ಉತ್ತಮ ರೀತಿಯ ಡೆಕೋ ರೇಶನ್ ಮಾಡುವ ಇಂಗಿತವನ್ನ ಮೇದಾರ ಸಮಾಜದವರು ವ್ಯಕ್ತಪಡಿಸಿದ್ದಾರೆ.

ಈ ಟವರ್ ರೂಪಿಸಲು ಯಾವುದೇ ಇಂಜಿನೀಯರ್ ಸಹಾಯ ಪಡೆದಿಲ್ಲ, ಬಣ್ಣ ಸಹ ಬಳಕೆ ಮಾಡಿಲ್ಲ, ಗಣಪತಿ ಸಹ ಮಣ್ಣಿನಿಂದ ಮಾಡಿದ್ದು ಆಕರ್ಷಣೀಯವಾಗಿದೆ. ದೂರದ ಪ್ಯಾರಿಸ್​ನ ಐಫೆಲ್ ಟವರ್ ಪ್ರತಿರೂಪ ರಾಣೆಬೆನ್ನೂರಿನ ಮೇದಾರ ಓಣಿಯಲ್ಲಿ ನಿರ್ಮಾಣವಾಗಿದ್ದ ಗಣೇಶ ಭಕ್ತರಿಗೆ ಸಂತಸ ತಂದಿದೆ.

ಇದನ್ನೂ ಓದಿ: ಹುಬ್ಬಳ್ಳಿ : ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಅದ್ಧೂರಿ ಮೆರವಣಿಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.