ETV Bharat / state

ತಂದೆ ಮೇಲಿನ ಪ್ರೀತಿ : ಹಾವೇರಿಯಲ್ಲಿ ದೇವಾಲಯವನ್ನೇ ಕಟ್ಟಿ ಪೂಜಿಸಿದ ಮಕ್ಕಳು - children who built the temple for their father in Haveri

ಪ್ರತಿಯೊಬ್ಬ ಮಕ್ಕಳು ತಮ್ಮ ತಂದೆಯನ್ನ ನೆನಪಿಸಿಕೊಳ್ಳಬೇಕು ಅಂತ ತಂದೆ ತೀರಿಹೋದ ಕೆಲವೇ ತಿಂಗಳುಗಳಲ್ಲಿ ತಂದೆಗೊಂದು ದೇವಾಲಯ ನಿರ್ಮಾಣ ಮಾಡಿದ್ದಾರೆ. ನಿತ್ಯವೂ ತೋಟದಲ್ಲಿ ಪೂಜೆ ಮಾಡಲಾಗ್ತಿದೆ. ವಿಶೇಷ ದಿನಗಳಲ್ಲಿ ತಂದೆಯ ದೇವಾಲಯದಲ್ಲಿ ಕುಟುಂಬದ ಎಲ್ಲ ಸದಸ್ಯರು ಸೇರಿ ವಿಶೇಷ ಪೂಜೆ ಸಲ್ಲಿಸ್ತಾರೆ. ತಂದೆ ತೀರಿಹೋದ್ರೂ ಅವರ ನೆನಪು ಮಾಸದಿರಲಿ ಅನ್ನೋ ಕಾರಣಕ್ಕೆ ದೇವಾಲಯ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ..

the-children-who-built-the-temple-in-the-name-of-their-father-in-haveri
ತಂದೆ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಮಕ್ಕಳು
author img

By

Published : Jun 20, 2021, 5:03 PM IST

ಹಾವೇರಿ : ಇತ್ತೀಚಿನ ದಿನಗಳಲ್ಲಿ ತಂದೆ ಮಕ್ಕಳ ಸಂಬಂಧ ಹದಗೆಡುತ್ತಿದೆ. ವೃದ್ಧಾಪ್ಯದಲ್ಲಂತೂ ತಂದೆಯನ್ನ ಯಾವ್ಯಾವುದೋ ಕಾರಣಕ್ಕೆ ದೂರ ಮಾಡಿಬಿಡ್ತಾರೆ. ಅದರಲ್ಲೂ ತಂದೆ ತೀರಿಹೋದ ನಂತರ ಅವರ ನೆನಪು ಮಾಡಿಕೊಳ್ಳುವುದು ವಿರಳ. ಆದರೆ, ಹಾನಗಲ್ ತಾಲೂಕಿನ ತಿಳವಳ್ಳಿ ಗ್ರಾಮದಲ್ಲಿ ಮೂರುಮಕ್ಕಳು ತಮ್ಮ ತಂದೆ ನೆನೆಪಿಗಾಗಿ ದೇವಾಲಯ ಕಟ್ಟಿಸಿದ್ದಾರೆ. ತಂದೆಯ ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ.

ಜಿಲ್ಲೆಯ ಹಾನಗಲ್ ತಾಲೂಕಿನ ತಿಳವಳ್ಳಿ ವಿಷ್ಣಪ್ಪರಾಯ್ಕರ ಎಂಬುವರಿಗೆ ಮೂರು ಜನ ಮಕ್ಕಳು. ಬಂಗಾರದ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ವಿಷ್ಣಪ್ಪ ಕಷ್ಟಪಟ್ಟು ಜೀವನ ನಡೆಸಿದ್ರು. ಮೂವರು ಮಕ್ಕಳಿಗೆ ಬಡತನದಲ್ಲೇ ಉತ್ತಮ ಶಿಕ್ಷಣ ಕೊಡಿಸಿದ್ರು. ಹಿರಿಯ ಪುತ್ರ ಸಂಜೀವ ಎಂಬಿಎ ಪದವಿ ಪಡೆದು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದಾರೆ. 2ನೇ ಮಗ ರಾಜೀವ್ ಬಂಗಾರದ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡ್ತಿದ್ದಾರೆ. 3ನೇ ಮಗ ರಾಘವೇಂದ್ರ ವೈದ್ಯನಾಗಿ ಸೇವೆ ಮಾಡ್ತಿದ್ದಾರೆ.

ತಂದೆ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದ ಮಕ್ಕಳು

ಬಡತನದಲ್ಲಿ ಮಕ್ಕಳನ್ನ ಈ ಮಟ್ಟಕ್ಕೆ ಬೆಳೆಸಿದ ವಿಷ್ಣಪ್ಪ ಕಳೆದ ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ರು. ತಂದೆಯ ಋಣ ತೀರಿಸೋಕೆ ಸಾಧ್ಯವಿಲ್ಲ. ಆದ್ರೆ, ತಂದೆಯ ನೆನಪಿಗಾಗಿ ಮೂವರು ಮಕ್ಕಳು ಸೇರಿಕೊಂಡು ಗ್ರಾಮದ ಹೊರ ವಲಯದಲ್ಲಿರೋ ತಮ್ಮ ತೋಟದಲ್ಲಿ ದೇವಾಲಯ ನಿರ್ಮಿಸಿದ್ದಾರೆ. 40 ಸಾವಿರ ರೂಪಾಯಿ ಖರ್ಚು ಮಾಡಿ ಕಾರ್ಗಲ್ಲಿನಿಂದ ತಂದೆಯ ಮೂರ್ತಿ ತಯಾರಿಸಿ ಪ್ರತಿಷ್ಠಾಪನೆ ಮಾಡಿದ್ದಾರೆ.

ದೇವಾಲಯ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪನೆ : ಪ್ರತಿಯೊಬ್ಬ ಮಕ್ಕಳು ತಮ್ಮ ತಂದೆಯನ್ನ ನೆನಪಿಸಿಕೊಳ್ಳಬೇಕು ಅಂತ ತಂದೆ ತೀರಿಹೋದ ಕೆಲವೇ ತಿಂಗಳುಗಳಲ್ಲಿ ತಂದೆಗೊಂದು ದೇವಾಲಯ ನಿರ್ಮಾಣ ಮಾಡಿದ್ದಾರೆ. ನಿತ್ಯವೂ ತೋಟದಲ್ಲಿ ಪೂಜೆ ಮಾಡಲಾಗ್ತಿದೆ. ವಿಶೇಷ ದಿನಗಳಲ್ಲಿ ತಂದೆಯ ದೇವಾಲಯದಲ್ಲಿ ಕುಟುಂಬದ ಎಲ್ಲ ಸದಸ್ಯರು ಸೇರಿ ವಿಶೇಷ ಪೂಜೆ ಸಲ್ಲಿಸ್ತಾರೆ. ತಂದೆ ತೀರಿಹೋದ್ರೂ ಅವರ ನೆನಪು ಮಾಸದಿರಲಿ ಅನ್ನೋ ಕಾರಣಕ್ಕೆ ದೇವಾಲಯ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.

ಪಿತೃ ಪ್ರೇಮ ಇತರರಿಗೆ ಮಾದರಿ : ತಂದೆ ಮತ್ತು ತಾಯಿ ಪ್ರತಿಯೊಬ್ಬ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸ್ತಾರೆ. ಯಾರೆಲ್ಲರ ಋಣವನ್ನ ತೀರಿಸಿದ್ರೂ ತಂದೆ ಮತ್ತು ತಾಯಿಯ ಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಅದೆಷ್ಟೋ ಮಕ್ಕಳು ತಂದೆ ಬದುಕಿದ್ದಾಗಲೇ ದೂರ ಮಾಡಿರ್ತಾರೆ. ಇನ್ನು, ಕೆಲವರು ತಂದೆ ಸತ್ತ ಮೇಲೆ ಅವರನ್ನ ನೆನಪು ಮಾಡೋದೇ ಇಲ್ಲ. ಅಂಥದ್ರಲ್ಲಿ ತಂದೆ ಸತ್ತ ನಂತರ ಅವರ ನೆನಪಿನಲ್ಲಿ ದೇವಾಲಯ ನಿರ್ಮಿಸಿ, ಮೂರ್ತಿ ಪ್ರತಿಷ್ಠಾಪನೆ ಮಾಡಿ ಪೂಜೆ ಮಾಡ್ತಿರೋ ರಾಯ್ಕರ್ ಸಹೋದರರ ಪಿತೃ ಪ್ರೇಮ ಇತರರಿಗೆ ಮಾದರಿ.

ಓದಿ: ಶಾಸಕ ಅರವಿಂದ್‌ ಬೆಲ್ಲದ್ ಫೋನ್ ಕದ್ದಾಲಿಕೆ ಪ್ರಕರಣದ ತನಿಖೆ ನಡೆಯುತ್ತಿದೆ : ಗೃಹ ಸಚಿವ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.