ETV Bharat / state

ಹಾವೇರಿ: ನಾಳೆ 500ಕ್ಕೂ ಹೆಚ್ಚು ರೈತರಿಂದ ತೆಲಂಗಾಣ ಚಲೋ - Assembly Elections

Telangana Chalo from Haveri farmers: ಹಾವೇರಿ ಜಿಲ್ಲೆಯ ನೂರಾರು ರೈತರು ನಾಳೆ (ನ.21 ರಂದು) ತೆಲಂಗಾಣ ಚಲೋ ಕೈಗೊಳ್ಳಲಿದ್ದಾರೆ.

Telangana Chalo
ನಾಳೆ ಹಾವೇರಿ ಜಿಲ್ಲೆಯಿಂದ 500ಕ್ಕೂ ಹೆಚ್ಚು ರೈತರಿಂದ ತೆಲಂಗಾಣ ಚಲೋ
author img

By ETV Bharat Karnataka Team

Published : Nov 20, 2023, 12:37 PM IST

Updated : Nov 20, 2023, 1:18 PM IST

ಹಾವೇರಿ: ನಾಳೆ 500ಕ್ಕೂ ಹೆಚ್ಚು ರೈತರಿಂದ ತೆಲಂಗಾಣ ಚಲೋ

ಹಾವೇರಿ: ತೆಲಂಗಾಣ ವಿಧಾನಸಭಾ ಚುನಾವಣೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆಯ ವಿಷಯವಾಗಿದೆ. ರಾಜ್ಯದಿಂದ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಈಗಾಗಲೇ ಭರ್ಜರಿ ಪ್ರಚಾರ ನಡೆಸಿದ್ದಾರೆ. ಶತಾಗತಾಯ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಆದರೆ, ಇವರ ವಿರುದ್ಧ ಪ್ರಚಾರ ನಡೆಸಲು ಇದೀಗ ಹಾವೇರಿ ಜಿಲ್ಲೆಯಿಂದ 500ಕ್ಕೂ ಹೆಚ್ಚು ರೈತರು ನ.21ರಂದು ತೆಲಂಗಾಣ ಚಲೋ ಕೈಗೊಳ್ಳಲಿದ್ದಾರೆ.

''ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ಇಂದಿರಾ ಪಾರ್ಕ್​ನಲ್ಲಿ ರೈತ ಸಂಘಟನೆಗಳು ಸಮಾವೇಶ ಆಯೋಜಿಸಲಿವೆ. ಕಾಂಗ್ರೆಸ್ ಕರ್ನಾಟಕದಲ್ಲಿ ಚುನಾವಣೆಗೆ ಪೂರ್ವ ರೈತರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿತ್ತು. ಅಲ್ಲದೇ ಪ್ರಣಾಳಿಕೆಯಲ್ಲಿ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ತಗೆದುಕೊಳ್ಳುವುದಾಗಿ ತಿಳಿಸಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾದರೂ ಸಹ ರೈತರ ಸಮಸ್ಯೆ ಬಗೆಹರಿಸುತ್ತಿಲ್ಲ. ರೈತರಿಗೆ ಮಾರಕವಾದ ಕಾಯ್ದೆಗಳನ್ನು ವಾಪಸ್ ತಗೆದುಕೊಳುತ್ತಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ತೆಲಂಗಾಣಕ್ಕೆ ಹೋಗಿ ಕರ್ನಾಟಕದಲ್ಲಿ ತಮ್ಮ ಪಕ್ಷ ನೀಡಿದ ಐದು ಗ್ಯಾರಂಟಿ ಈಡೇರಿಸಿದೆ ಎನ್ನುತ್ತಿದ್ದಾರೆ".

"ಅಲ್ಲದೆ ರೈತರ ಸುಭೀಕ್ಷೆಯಾಗಿದ್ದಾರೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಆದರೆ, ಕರ್ನಾಟಕದಲ್ಲಿ ಬೇರೆಯದೇ ಸ್ಥಿತಿ ಇದೆ. ಇಲ್ಲಿಯ ರೈತರನ್ನು ಕಾಂಗ್ರೆಸ್ ಪಕ್ಷ ಹೇಗೆ ಯಾಮಾರಿಸಿತು. ರೈತ ಪರಿಸ್ಥಿತಿ ಏನಾಗಿದೆ ಇವೆಲ್ಲಗಳ ಕುರಿತಂತೆ ತೆಲಂಗಾಣದ ರೈತರಿಗೆ ತಿಳಿಸುವ ಕಾರ್ಯವನ್ನು ಮಾಡಲಾಗುವುದು. ಅಷ್ಟೇ ಅಲ್ಲದೆ ಈ ಕುರಿತಂತೆ ಒಂದು ಯಾದಿ ಮಾಡಿದ್ದು, ಸಮಾವೇಶದಲ್ಲಿ ಅದನ್ನು ಮಂಡಿಸಲಾಗುವುದು'' ಎಂದು ರೈತರು ತಿಳಿಸಿದ್ದಾರೆ.

''ಕಾಂಗ್ರೆಸ್‌ಗೆ ಮತಹಾಕದಂತೆ ಮತಹಾಕಿದರೆ, ರೈತರು ಎನೆಲ್ಲಾ ಸಮಸ್ಯೆ ಎದುರಿಸುತ್ತಾರೆ ಎಂಬುವುದನ್ನು ತಿಳಿಸುತ್ತೇವೆ. ಕಳೆದ ಮೂರು ತಿಂಗಳ ಹಿಂದೆ ಹಾವೇರಿಗೆ ಬಂದಿದ್ದ ಸಿಎಂ ಸಿದ್ದರಾಮಯ್ಯಗೆ ರೈತರು ಎಪಿಎಂಸಿ ಕಾಯ್ದೆ ವಾಪಸ್​ ಪಡೆದುಕೊಳ್ಳುವ ಬಗ್ಗೆ ರೈತರು ಆಗ್ರಹಿಸಿದ್ದರು. ಅಂದು ಸಿಎಂ ಎಪಿಎಂಸಿ ಕಾಯ್ದೆ ವಾಪಸ್ ತಗೆದುಕೊಳ್ಳುವ ಭರವಸೆ ನೀಡಿದ್ದರು. ಆದರೆ, ಮೂರು ತಿಂಗಳಾದರೂ ಎಪಿಎಂಸಿ ಕಾಯ್ದೆ ವಾಪಸ್ ಪಡೆದಿಲ್ಲ'' ಎಂದು ಕಿಡಿಕಾರಿದ್ದಾರೆ.

10 ಸಾವಿರಕ್ಕೂ ಅಧಿಕ ರೈತರು ಭಾಗವಹಿಸುವ ನಿರೀಕ್ಷೆ: ''ಹಾವೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ 10 ಸಾವಿರಕ್ಕೂ ಅಧಿಕ ರೈತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಹಾವೇರಿ ಜಿಲ್ಲೆಯಿಂದ 500ಕ್ಕೂ ಹೆಚ್ಚು ರೈತರು ನ.21 ರಂದು ಹುಬ್ಬಳ್ಳಿಯಿಂದ ರೈಲಿನ ಮೂಲಕ ಹೈದರಾಬಾದ್‌ಗೆ ತೆರಳುತ್ತೇವೆ. ಸಮಾವೇಶದಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳನ್ನು ಬಿಚ್ಚಿಡಲಿದ್ದೇವೆ. ಕಾಂಗ್ರೆಸ್ ವಿರುದ್ಧ ಪ್ರಚಾರ ನಡೆಸಲಿದ್ದೇವೆ. ಈ ಮಧ್ಯೆ ರಾಜ್ಯದಲ್ಲಿ ಭೀಕರ ಬರಗಾಲವಿದೆ. ಈ ಭಾಗದ ಸಮಸ್ಯೆಗಳನ್ನು ಬಗೆಹರಿಸಲು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರಯತ್ನಿಸುವುದನ್ನು ಬಿಟ್ಟು ತೆಲಂಗಾಣಕ್ಕೆ ಪ್ರಚಾರ ಹೋಗುತ್ತಿರುವುದು ಸರಿಯಲ್ಲ" ಎಂದು ರೈತರು ಗರಂ ಆದರು. ಹಾವೇರಿ ಜಿಲ್ಲೆಯ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತರು ಹೈದರಾಬಾದ್‌ಗೆ ಪ್ರಯಾಣಿಸಲಿದ್ದಾರೆ.

ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಡಿ.10 ರಿಂದ 24ರ ವರೆಗೆ ಚಂಪಾಷಷ್ಠಿ ಮಹೋತ್ಸವ

Last Updated : Nov 20, 2023, 1:18 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.