ETV Bharat / state

ಅನುದಾನ ಹಂಚಿಕೆಯಲ್ಲಿ ಶಾಸಕ, ನಗರಸಭೆ ಸದಸ್ಯನ ನಡುವೆ ಮಾತಿನ ಚಕಮಕಿ - bjp mla raunkumar

ಎಲ್ಲ ವಾರ್ಡ್​ಗಳಿಗೆ ಸಮನಾಗಿ ಅನುದಾನ ಹಂಚುವ ಕುರಿತು ಶಾಸಕ ಹಾಗೂ ನಗರಸಭೆ ಸದಸ್ಯನ ಮಧ್ಯೆ ವಾಕ್ಸಮರ ಉಂಟಾದ ಘಟನೆ ನಡೆದಿದೆ.

ಶಾಸಕ, ನಗರಸಭೆ ಸದಸ್ಯನ ನಡುವೆ ಮಾತಿನ ಚಕಮಕಿ
ಶಾಸಕ, ನಗರಸಭೆ ಸದಸ್ಯನ ನಡುವೆ ಮಾತಿನ ಚಕಮಕಿ
author img

By

Published : Feb 16, 2021, 4:27 AM IST

ರಾಣೆಬೆನ್ನೂರ: ಅನುದಾನ ಹಂಚಿಕೆಯಲ್ಲಿ ತಾರತಮ್ಯ ಆಗಿರುವುದನ್ನು ಪ್ರಶ್ನಿಸಿದ್ದಕ್ಕೆ ನಗರಸಭೆ ಸದಸ್ಯನ ಮೇಲೆ ಶಾಸಕ ಗರಂ ಆದ ಘಟನೆ ರಾಣೆಬೆನ್ನೂರ ನಗರಸಭೆಯಲ್ಲಿ ನಡೆದಿದೆ.

ಬಿಜೆಪಿ ಶಾಸಕ ಅರುಣಕುಮಾರ ಪೂಜಾರ ಹಾಗೂ ನಗರಸಭೆಯ ಕಾಂಗ್ರೆಸ್ ಸದಸ್ಯ ನಿಂಗರಾಜ ಕೋಡಿಹಳ್ಳಿ ನಡುವೆ ಮಾತಿನ ಚಕಮಕಿ ನಡೆಯಿತು.

ಶಾಸಕ, ನಗರಸಭೆ ಸದಸ್ಯನ ನಡುವೆ ಮಾತಿನ ಚಕಮಕಿ

ನಗರಸಭೆಗೆ ಬಿಡುಗಡೆಯಾಗಿದ್ದ ಐದು ಕೋಟಿ ರೂಪಾಯಿ ಎಸ್ಎಫ್​​ಸಿ ಅನುದಾನವನ್ನು ಕೇವಲ‌ ಮೂರು ವಾರ್ಡಗಳಿಗೆ ಹಾಕಲಾಗಿದೆ. ಇದನ್ನು ಸರಿ ಮಾಡಿ 35 ವಾರ್ಡ್​ಗಳಿಗೆ ಸಮನಾಗಿ ಅನುದಾನ ಹಂಚಿಕೆ ಮಾಡುವಂತೆ ಸದಸ್ಯ ಕೇಳಿದ್ದಾರೆ. ಅಲ್ಲದೆ 18 ಜನ ಸದಸ್ಯರು ಸಹಿ‌ ಮಾಡಿ ಪೌರಾಯುಕ್ತರಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕಾಮಗಾರಿ ಹಾಕಲಾಗಿದೆ ಎಂದು ಪ್ರಶ್ನಿಸಿದಕ್ಕೆ ಶಾಸಕರು ವೇದಿಕೆ ಮೇಲೆ ಗರಂ ಆದರು.

'ಏ ಗೊತ್ತೈತಿ ನಡಿಯೋ, ನನಗೆಲ್ಲ ಗೊತ್ತಿದೆ' ಎಂದು ಸದಸ್ಯನನ್ನ ಗದರಿಸಿರುವುದು ವಿಡಿಯೋದಲ್ಲಿದೆ. ಉಪಸ್ಥಿತರಿದ್ದ ತೋಟಗಾರಿಕೆ ಮತ್ತು ರೇಷ್ಮೆ ಸಚಿವ ಆರ್.ಶಂಕರ ಅವರು ಮೂಕ ಪ್ರೇಕ್ಷಕರಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.