ETV Bharat / state

ಹಾವೇರಿ : ಹೆದ್ದಾರಿ ಬದಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆ - Suspicious death of youth in Haveri

ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆ- ಹಾವೇರಿ ಜಿಲ್ಲೆಯ ಸೋಮನಕಟ್ಟಿ ಗ್ರಾಮದಲ್ಲಿ ಪ್ರಕರಣ- ಪೊಲೀಸರಿಂದ ತನಿಖೆ

suspicious-death-of-youth-in-haveri
ಹಾವೇರಿ : ಹೆದ್ದಾರಿ ಬದಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆ
author img

By

Published : Jul 28, 2022, 6:02 PM IST

Updated : Jul 28, 2022, 6:50 PM IST

ಹಾವೇರಿ : ಹೆದ್ದಾರಿ ಬದಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆಯಾಗಿರುವ ಘಟನೆ ಹಾವೇರಿ ತಾಲೂಕು ಸೋಮನಕಟ್ಟಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನ್ನು ಹಡಗಲಿ ಮೂಲದ ನವೀನ ರಾಥೋಡ್ (27) ಎಂದು ಗುರುತಿಸಲಾಗಿದೆ. ಮೊಳಕಾಲ್ಮೂರು ಮತ್ತು ಶಿರಸಿ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ನವೀನ್ ನ ಶವ ಪತ್ತೆಯಾಗಿದ್ದು, ಮೃತದೇಹದ ಮೇಲೆ ಗಾಯದ ಗುರುತುಗಳು ಪತ್ತೆಯಾಗಿವೆ.

ಹಾವೇರಿ : ಹೆದ್ದಾರಿ ಬದಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆ

ದುಷ್ಕರ್ಮಿಗಳು ನವೀನ್ ಮೇಲೆ ಹಲ್ಲೆ ಮಾಡಿ ಕುತ್ತಿಗೆ ಬಿಗಿದು ಕೊಲೆ ಮಾಡಿ ಹೋಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ನವೀನ್ ಕುಡಿತ, ಗಾಂಜಾ ಸೇರಿದಂತೆ ವಿವಿಧ ಚಟಗಳಿಗೆ ದಾಸನಾಗಿದ್ದ. ಅಲ್ಲದೆ ಕಳ್ಳತನದಲ್ಲಿ ತೊಡಗಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಹೇಳಲಾಗ್ತಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಎಸ್ಪಿ ಹನುಮಂತರಾಯ ಹಾಗೂ ಎಎಸ್ಪಿ ವಿಜಯಕುಮಾರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಕಲೆ ಹಾಕಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಗುತ್ತಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ : ಒಂದಲ್ಲ, ಎರಡಲ್ಲ ಬರೋಬ್ಬರಿ 8 ಯುವತಿಯರ ಜೊತೆ ಮದುವೆ.. ವಂಚಕನ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ!?

Last Updated : Jul 28, 2022, 6:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.