ಹಾವೇರಿ : ಶಾಲೆಗಳನ್ನು ಪ್ರಾರಂಭ ಮಾಡುವಂತೆ ಮೊದಲು ಹೇಳಿದವನು ನಾನು ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕೊರೊನಾದಿಂದ ಶಾಲೆಗಳು ಬಂದ್ ಆದಾಗ ಶಾಲೆ ಮತ್ತು ಮಕ್ಕಳ ಸಂಬಂಧ ಕಡಿತವಾಗಿತ್ತು. ಶಾಲೆಗೆ ಮಕ್ಕಳು ಬರದೆ ಪಾಸ್ ಮಾಡುವ ಪದ್ಧತಿ ಶುರುವಾಯಿತು. ಇದರಿಂದ ವಿದ್ಯಾರ್ಥಿಗಳ ಮತ್ತು ಶಾಲೆ ಸಂಬಂಧ ತಪ್ಪಿತ್ತು ಎಂದು ಹೊರಟ್ಟಿ ಅಭಿಪ್ರಾಯಪಟ್ಟರು.
ಈ ಹಿಂದೆ ಸುರೇಶ್ ಕುಮಾರ್ ಸಚಿವರಾಗಿದ್ದಾಗ ಸಹ ವಿದ್ಯಾಗಮ ಯೋಜನೆ ಬೇಡ ಎಂದಿದ್ದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ಹೊಸ ಶಿಕ್ಷಣ ಸಚಿವರು ನನ್ನನ್ನು ಭೇಟಿಯಾಗಿದ್ದರು ಎಂದು ಹೊರಟ್ಟಿ ತಿಳಿಸಿದರು.
ಶಾಲೆ ಆರಂಭಿಸುವ ಕುರಿತಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಶಾಲೆ ಆರಂಭ ಸಮಿತಿ ರಚಿಸುವಂತೆ ತಿಳಿಸಿದ್ದೇನೆ. ಮಕ್ಕಳಿಗೆ ಏನಾದರೂ ಆದರೆ ಈ ಸಮಿತಿಯು ಜವಾಬ್ದಾರಿ ತಗೋಬೇಕು. ಇನ್ನು, ಹೊಸ ಶಿಕ್ಷಣ ನೀತಿ ಕುರಿತಂತೆ ಸಭಾಪತಿ ಹೊರಟ್ಟಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ರಾಜ್ಯದಲ್ಲಿ 6,7,8ನೇ ತರಗತಿ ಪುನಾರಂಭಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್
ಸರ್ಕಾರಗಳು ಬದಲಾದಂತೆ ಶಿಕ್ಷಣ ನೀತಿಗಳು ಬದಲಾಗಬಾರದು ಎಂದು ಹೊರಟ್ಟಿ ತಿಳಿಸಿದರು. ಹಿಂದಿನ ಶಿಕ್ಷಣ ನೀತಿಯೇ ಚೆನ್ನಾಗಿತ್ತು. ಹೊಸ ಶಿಕ್ಷಣ ನೀತಿ ಸರಿಯಾಗಿಲ್ಲ ಎಂದು ಹೊರಟ್ಟಿ ತಿಳಿಸಿದರು. ಶಿಕ್ಷಣ ವರದಿಗಳನ್ನು ವಿಸ್ತೃತವಾಗಿ ಅಧ್ಯಯನ ಮಾಡಿ ಕೆಲ ಬದಲಾವಣೆ ಮಾಡಬೇಕು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಪರಿಪೂರ್ಣತೆಯಿಂದ ಕೂಡಿಲ್ಲ ಎಂದು ಹೊರಟ್ಟಿ ಅಭಿಪ್ರಾಯಪಟ್ಟರು. ಸರ್ಕಾರಗಳು ಬದಲಾದಂತೆ ಶಿಕ್ಷಣ ನೀತಿಗಳು ಬದಲಾದರೆ ಶಿಕ್ಷಣ ವ್ಯವಸ್ಥೆ ಸರಿಯಾಗಿರುವುದಿಲ್ಲ ಎಂದು ಸಭಾಪತಿ ಹೊರಟ್ಟಿ ತಿಳಿಸಿದರು. ನಮ್ಮ ದೇಶದಲ್ಲಿರುವ ಮೂರು ಹಂತದ ಶಿಕ್ಷಣವೇ ಉತ್ತಮ ಎಂಬ ಅಭಿಪ್ರಾಯವನ್ನ ಹೊರಟ್ಟಿ ವ್ಯಕ್ತಪಡಿಸಿದರು.
ಇನ್ನು, ಇದೇ ವೇಳೆ 2023ರ ಚುನಾವಣೆ ನನ್ನ ಕೊನೆಯ ಹೋರಾಟ ಎಂದು ತಿಳಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ಅವರ ವೈಯಕ್ತಿಕ, ಆ ಅಭಿಪ್ರಾಯ ಕುರಿತು ಸಭಾಪತಿ ರಾಜಕೀಯ ಮಾತನಾಡಬಾರದು ಎಂದು ಹೇಳಿದ್ರು.