ಹಾವೇರಿ : ಕನ್ನಡ ಕೋಗಿಲೆ ಖ್ಯಾತಿಯ ಗಾಯಕ ಖಾಸಿಮ್ ಅಲಿ ಕೊರೊನಾ ತಡೆಗೆ ಶ್ರಮಿಸುತ್ತಿರುವ ಹಾನಗಲ್ ಠಾಣೆಯ ಪೊಲೀಸ್ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನ ಏರ್ಪಡಿಸಿದ್ರು.
ಇದರ ಜೊತೆಗೆ ಠಾಣೆಯ ಆವರಣದಲ್ಲಿ ತಮ್ಮ ಸುಮಧುರ ಕಂಠದಿಂದ ಕೊರೊನಾ ಕುರಿತು ಹಾಡು ಹೇಳುವುದರ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಉತ್ಸಾಹ ತುಂಬುವುದರ ಜೊತೆಗೆ ಜಾಗೃತಿ ಮೂಡಿಸಿದರು.
ಅಲ್ಲದೇ ನಗರದ ಹೊರ ವಲಯದಲ್ಲಿರುವ 24 ಬಡ ಕುಟುಂಬಗಳಿಗೆ ತೆರಳಿ ಧಾನ್ಯಗಳನ್ನ ವಿತರಿಸಿದ್ರು.