ETV Bharat / state

ಬಿಜೆಪಿಯವರು ದಲಿತರನ್ನು ಸಿಎಂ ಅಭ್ಯರ್ಥಿ ಮಾಡಲಿ : ಸಿದ್ದರಾಮಯ್ಯ - siddaramaiah spoke against former CM jagadeesh shettar

ಬಿಜೆಪಿಯವರು ಮುಂದಿನ ಚುನಾವಣೆಯಲ್ಲಿ ದಲಿತರನ್ನು ಸಿಎಂ ಅಭ್ಯರ್ಥಿ ಮಾಡಲಿ. ಅವರು ಯಾಕೆ ಮಾಡೋದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಜಿ ಸಿಎಂ ಜಗದೀಶ್ ಶೆಟ್ಟರ್​ಗೆ ತಿರುಗೇಟು ನೀಡಿದ್ದಾರೆ.

siddaramaiah-statement-against-former-cm-jagadish-shettar
ಬಿಜೆಪಿಯವರು ದಲಿತರನ್ನು ಸಿಎಂ ಅಭ್ಯರ್ಥಿ ಮಾಡಲಿ : ಸಿದ್ದರಾಮಯ್ಯ
author img

By

Published : Jun 8, 2022, 8:24 PM IST

ಹಾವೇರಿ : ಬಿಜೆಪಿಯವರು ಮುಂದಿನ ಚುನಾವಣೆಗೆ ದಲಿತರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ. ಅವರು ಯಾಕೆ ಮಾಡೋದಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ತಿರುಗೇಟು ನೀಡಿದ್ದಾರೆ. ದಲಿತ ನಾಯಕ ಡಾ.ಪರಮೇಶ್ವರರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂಬ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಮಾಡಿದ್ದಾರಾ, ನಾವು ಮಾಡೋದಿಲ್ಲ, ಅವರು ಮಾಡಿದ್ದಾರಾ.? ಬಿಜೆಪಿಯವರು ಮೊದಲು ತಮ್ಮ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು.

ಬಿಜೆಪಿಯವರು ಮುಂದಿನ ಚುನಾವಣೆಯಲ್ಲಿ ದಲಿತರನ್ನು ಸಿಎಂ ಮಾಡಲಿ.. ಶೆಟ್ಟರ್​ಗೆ ಸಿದ್ದರಾಮಯ್ಯ ತಿರುಗೇಟು

ಅವರು ಇರೋದು ಬರೀ ಹೇಳೋದಕ್ಕಾ, ದಲಿತರನ್ನು ಸಿಎಂ ಅಭ್ಯರ್ಥಿ ಮಾಡಲಿ. ಯಾಕೆ ಅವರು ಮಾಡೋದಿಲ್ಲ. ಕಾಂಗ್ರೆಸ್ ನಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರು, ಮುಂದುವರೆದವರು ಯಾರು ಬೇಕಾದರೂ ಸಿಎಂ ಆಗಬಹುದು. ಆದರೆ ಬಿಜೆಪಿಯಲ್ಲಿ ಹಾಗಾಗುತ್ತಾ.? ಯಡಿಯೂರಪ್ಪ ನಂತರ ಬಸವರಾಜ ಬೊಮ್ಮಾಯಿ ಯಾಕಾಗಬೇಕು.? ಕಾರಜೋಳರನ್ನು ಸಿಎಂ ಮಾಡಬಹುದಿತ್ತಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ನಮ್ಮ ಅಭ್ಯರ್ಥಿಗೆ ಬೆಂಬಲ ನೀಡಲಿ : ನಾವು ಮೊದಲೇ ಅಭ್ಯರ್ಥಿ ಹಾಕಿದ್ದೇವೆ‌. ನಾವು ಅಭ್ಯರ್ಥಿ ಹಾಕಿದ ಮೇಲೆ ಜೆಡಿಎಸ್ ನವರು ಅಭ್ಯರ್ಥಿ ಹಾಕಿದ್ದಾರೆ. ಕುಮಾರಸ್ವಾಮಿಯವರು ತಮ್ಮ ಅಭ್ಯರ್ಥಿಯನ್ನು ನಿವೃತ್ತಿ ಮಾಡಿಸಿ ನಮಗೆ ವೋಟು ಹಾಕಿಸಿ. ದೇವೇಗೌಡರು ರಾಜ್ಯಸಭೆಗೆ ನಿಂತಿದ್ದಾಗ ನಾವು ಅಭ್ಯರ್ಥಿ ಹಾಕಿರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಕುಮಾರಸ್ವಾಮಿಯವರನ್ನು ಸಿಎಂ ಮಾಡಿದವರು ನಾವು. ಈಗ ನಮಗೆ ಬೆಂಬಲಿಸಲಿ ಎಂದರು.

ಬಿಜೆಪಿಯನ್ನು ಸೋಲಿಸುವುದು ನಿಮ್ಮ ಅಭಿಪ್ರಾಯ, ಉದ್ದೇಶವಿದ್ದರೆ ನಮಗೆ ಬೆಂಬಲ ನೀಡಿ. ನಾವು ಅಭ್ಯರ್ಥಿ ಹಾಕಿದ ಮೇಲೆ ಇವರು ಸುಮ್ಮನೆ ಇರಬೇಕಿತ್ತು. ಈಗ ಅಭ್ಯರ್ಥಿ ಹಾಕಿ ಸುರ್ಜೇವಾಲಾರಿಗೆ ಮಾತಾಡಿದೆ, ಸೋನಿಯಾ ಗಾಂಧಿಯವರಿಗೆ ಮಾತಾಡಿದೆ ಎಂದು ಇವರ ಪಾಡಿಗೆ ಇವರೇ ಹೇಳಿಕೊಂಡರೆ ಹೇಗೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಅವರು ಸಹಕಾರ ಮಾಡಲಿ, ನಾವು ಸಹಕಾರ ತೆಗೆದುಕೊಳ್ಳೋಕೆ ತಯಾರಾಗಿದ್ದೇವೆ. ಅವರ ಮತಗಳನ್ನೆಲ್ಲ ನಮ್ಮ ಅಭ್ಯರ್ಥಿಗೆ ಹಾಕಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಓದಿ : ಕೃಷ್ಣ ಕಲೆಯಲ್ಲಿ ಮೂಡಿದ ಬೊಮ್ಮಾಯಿ ಭಾವಚಿತ್ರ : ಕಲಾವಿದನಿಂದ ಸಿಎಂ ಗೆ ಉಡುಗೊರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.