ETV Bharat / state

ವಾಟ್ಸ್​ಆ್ಯಪ್​​ ಸ್ಟೇಟಸ್​ಗೆ ಡೆತ್ ನೋಟ್ ಹಾಕಿ ಶಿರಸ್ತೇದಾರ ಆತ್ಮಹತ್ಯೆ: ಹಿರೇಕೆರೂರು ನೌಕರರ ಭವನದಲ್ಲಿ ಘಟನೆ - Etv Bharat Kannada

ಡೆತ್ ನೋಟ್ ಬರೆದಿಟ್ಟು ಶಿರಸ್ತೇದಾರ ಆತ್ಮಹತ್ಯೆ. ವಾಟ್ಸ್​ಆ್ಯಪ್​ ಸ್ಟೇಟಸ್​ಲ್ಲಿ ಡೆತ್ ನೋಟ್ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಶಿರಸ್ತೇದಾರ.

ಶಿರಸ್ತೇದಾರ ಆತ್ಮಹತ್ಯೆ
ಶಿರಸ್ತೇದಾರ ಆತ್ಮಹತ್ಯೆ
author img

By

Published : Sep 19, 2022, 6:26 PM IST

ಹಾವೇರಿ: ಶಿರಸ್ತೇದಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ಪಟ್ಟಣದ ಕೋರ್ಟ್ ಬಳಿ ಇರುವ ನೌಕರರ ಭವನದಲ್ಲಿ ನಡೆದಿದೆ. 42 ವರ್ಷದ ಮಲ್ಲಿಕಾರ್ಜುನ ಭರಗಿ ಆತ್ಮಹತ್ಯೆ ಮಾಡಿಕೊಂಡವರು. ಮೃತ ಮಲ್ಲಿಕಾರ್ಜುನ ಪಟ್ಟಣದ ಕೋರ್ಟ್‌ನಲ್ಲಿ ಶಿರಸ್ತೇದಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ.

ವಾಟ್ಸ್​ಆ್ಯಪ್​ ಸ್ಟೇಟಸ್​ಗೆ ಡೆತ್ ನೋಟ್ ಹಾಕಿ ಶಿರಸ್ತೇದಾರ ಆತ್ಮಹತ್ಯೆ: ಮಲ್ಲಿಕಾರ್ಜುನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ನಾಲ್ವರ ವಕೀಲರು ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದರು. ಹೀಗಾಗಿ ನನ್ನ ಸಾವಿನಿಂದ ಅವರಿಗೆ ಜಯವಾಗಲಿ ಎಂದು ಡೆನ್ ನೋಟ್ ಬರೆದಿಟ್ಟು, ವಾಟ್ಸ್​ಆ್ಯಪ್​ ​​ ಸ್ಟೇಟಸ್ ಹಾಕಿಕೊಂಡು ಮಲ್ಲಿಕಾರ್ಜುನ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಹಿರೇಕೆರೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶಿರಸ್ತೇದಾರ ಮಲ್ಲಿಕಾರ್ಜುನ ಸಾವಿಗೆ ಕಾರಣರಾದ ನಾಲ್ಕು ವಕೀಲರನ್ನ ವಶಕ್ಕೆ ಪಡೆದು ವಿಚಾರಣ ನಡೆಸುತ್ತಿದ್ದಾರೆ. ಈ ಕುರಿತಂತೆ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಇದನ್ನೂ ಓದಿ: ತಾಯಿಯ ಸಾವಿನಿಂದ ಮನನೊಂದು ಮಗ ಆತ್ಮಹತ್ಯೆ: ಕೆರೆಯಲ್ಲಿ ಶವ ಪತ್ತೆ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.