ETV Bharat / state

ಬೆಚ್ಚಿ ಬೀಳಿಸುವಂತಿದೆ ಮಾವಿನ ಹಣ್ಣಿನ ವ್ಯಾಪಾರಿ ಟ್ರಾವೆಲ್ ಹಿಸ್ಟರಿ: ಪೇಚಿಗೆ ಸಿಲುಕಿದ ಜಿಲ್ಲಾಡಳಿತ - haveri mango trader tested positive

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅಂದಲಗಿ ಗ್ರಾಮದ 25 ವರ್ಷದ ಮಾವಿನಹಣ್ಣಿನ ವ್ಯಾಪಾರಿಯೊಬ್ಬನಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು,ಅವನ ಟ್ರಾವೆಲ್​ ಹಿಸ್ಟರಿ ಭಯಾನಕವಾಗಿದೆ.

shiggavi corona patient travel history
ಕೊರೊನಾ ಸೋಂಕಿತ ಮಾವಿನ ಹಣ್ಣಿನ ವ್ಯಾಪಾರಿಯ ಟ್ರಾವೆಲ್ ಹಿಸ್ಟರಿ
author img

By

Published : May 11, 2020, 4:51 PM IST

ಹಾವೇರಿ : ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಅಂದಲಗಿ ಗ್ರಾಮದ ಮಾವಿನ ಹಣ್ಣು ವ್ಯಾಪಾರ ಮಾಡುವ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿದ್ದು, ಈತನ ಟ್ರಾವೆಲ್​ ಹಿಸ್ಟರಿ ಬೆಚ್ಚಿ ಬೀಳಿಸುವಂತಿದೆ.

ಕೊರೊನಾ ಸೋಂಕಿತ ಮಾವಿನ ಹಣ್ಣಿನ ವ್ಯಾಪಾರಿಯ ಟ್ರಾವೆಲ್ ಹಿಸ್ಟರಿ

ಈತ 25 ವರ್ಷದ P-853 ಹೆಸರಿನ ರೋಗಿಯಾಗಿದ್ದು, ಇಂದು ಈತನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಟ್ರಾವೆಲ್​​ ಹಿಸ್ಟರಿ:

ಏಪ್ರಿಲ್​ 23,2020ರಿಂದ ಈ ತನಕ ಮೂರು ಬಾರಿ ಮುಂಬೈನ ಎಪಿಎಂಸಿ ಮಾರುಕಟ್ಟೆಗೆ ಹೋಗಿ ಬಂದಿರೋ ವ್ಯಾಪಾರಿ.
ಏಪ್ರಿಲ್​ 23,2020 ರಂದು ಮೊದಲ ಬಾರಿಗೆ ಮುಂಬೈಗೆ ಭೇಟಿ ನೀಡಿದ್ದ
ಏಪ್ರಿಲ್​ 26,2020ರಂದು ಎರಡನೇ ಬಾರಿಗೆ ಮುಂಬೈಗೆ ಹೋಗಿ ಬಂದಿದ್ದ
ಏಪ್ರಿಲ್​ 29,2020ರಂದು ಮೂರನೆ ಬಾರಿಗೆ ಮುಂಬೈ ಮಾರ್ಕೆಟ್ ಗೆ ತೆರಳಿದ್ದ

ಮೇ 1,2020ರಂದು ಅಂದಲಗಿಗೆ ವಾಪಸ್​ ಆದ ನಂತರ ಮೇ 6,2020ರಂದು ಹಣ್ಣಿನ ಖರೀದಿಗಾಗಿ ಹಳ್ಳಿ ಹಳ್ಳಿಗೆ ಈ ಸೋಂಕಿತ ಓಡಾಡಿದ್ದಾನೆ. ಶಿಗ್ಗಾಂವಿ ಮತ್ತು ಹಾನಗಲ್ ತಾಲೂಕಿನ ವಿವಿಧ ಗ್ರಾಮಗಳಿಗೆ ಹೋಗಿ ಬಂದಿದ್ದಾನೆ.

ಅಂದಲಗಿ, ಹನುಮಸಾಗರ, ಶಡಗರವಳ್ಳಿ, ಬೈಲವಾಳ, ಕೊಪ್ಪರಸಿಕೊಪ್ಪ, ಶಿರಗೋಡ, ಗಿರಿಸಿನಕೊಪ್ಪ, ಹಾನಗಲ್, ಯಳ್ಳೂರು, ಯಳವಟ್ಟಿ, ದುಂಡಸಿ, ಬಸಾಪುರ, ಕೋಣನಕೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ತಿರುಗಾಡಿದ್ದಾನೆ.

ಈ ಎಲ್ಲ ಊರುಗಳ ರೈತರಿಂದ ಹಣ್ಣುಗಳನ್ನ ಖರೀದಿಸಿ ಮುಂಬೈ ಮಾರ್ಕೆಟ್​​​ಗೆ ತೆರಳಿ ಅನ್​​ಲೋಡ್ ಮಾಡಿ ಬಂದಿದ್ದಾನೆ. ಇದೀಗ ಈತನ ಟ್ರಾವೆಲ್​​ ಹಿಸ್ಟರಿ ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವು ತಂದಿಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.