ಹಾವೇರಿ: ಸಿಎಂ ಬಸವರಾಜ ಬೊಮ್ಮಾಯಿ ಕ್ಷೇತ್ರ ಶಿಗ್ಗಾವಿಯಲ್ಲಿ ಶೂಟೌಟ್ ಆಗಿ 18 ದಿನಗಳೇ ಕಳೆದಿವೆ. ಆದರೂ ಸಹ ಆರೋಪಿ ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಶೂಟೌಟ್ದಿಂದ ಗಾಯಗೊಂಡ ವಸಂತಕುಮಾರ್ ಸಂಬಂಧಿಕರು ಆರೋಪಿಸಿದ್ದಾರೆ.
ಆರೋಪಿಯ ಗುಂಡೇಟಿನಿಂದ ಗಾಯಗೊಂಡಿರುವ ವಸಂತಕುಮಾರ್ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಸಂತಕುಮಾರ್ ಸಂಬಂಧಿಕರು ಪ್ರತಿಭಟನೆ ಬದಲು ಪೊಲೀಸರಿಗೆ ಮನವಿ ಸಲ್ಲಿಸಿದರು. ಪ್ರಕರಣದ ಆರೋಪಿಯನ್ನು ಶೀಘ್ರವೇ ಬಂಧಿಸಬೇಕು ಎಂದು ಒತ್ತಾಯಿಸಿದರು. ಆರೋಪಿ ಬಂಧಿಸಿ ಇಲ್ಲವೇ ಪ್ರಕರಣವನ್ನು ಸಿಐಡಿ ಅಥವಾ ಸಿಬಿಐಗೆ ವಹಿಸಿ ಎಂದರು.
ಈ ಕುರಿತಂತೆ ಮಾತನಾಡಿದ ವಸಂತಕುಮಾರ ತಂದೆ ತನ್ನ ಮಗನಿಗೆ ಏನು ಗೊತ್ತಿಲ್ಲರಿ, ಸಂಜೆ ತನಕ ಜಮೀನಿನಲ್ಲಿ ಟ್ರ್ಯಾಕ್ಟರ್ನಲ್ಲಿ ಕೆಲಸ ಮಾಡಿದ್ದಾನೆ. ಸಂಜೆಯಾದ ನಂತರ ಶಿಗ್ಗಾವಿಗೆ ಸ್ನೇಹಿತರೊಂದಿಗೆ ಸಿನಿಮಾ ನೋಡಲು ಬಂದಿದ್ದ. ಈ ಸಂದರ್ಭದಲ್ಲಿ ಆರೋಪಿಯ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಆರೋಪಿ ಟಾಕೀಜ್‌ನಿಂದ ಹೊರಗೆ ಹೋಗಿ ಬಂದು ಗುಂಡು ಹಾರಿಸಿದ್ದಾನೆ. ಮಗ ಆಸ್ಪತ್ರೆಯಲ್ಲಿ ಸಾವು ಬದುಕಿನ ಹೋರಾಟ ನಡೆಸಿ ಈಗ ಸ್ವಲ್ಪ ಆರೋಗ್ಯದಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದರು.
ಇದನ್ನೂ ಓದಿ:ಅಂದು 68ಕ್ಕೆ ಆಲೌಟ್, ಇಂದು 67 ರನ್ಗಳ ಜಯ... ಹೈದರಾಬಾದ್ ವಿರುದ್ಧ ಸೇಡು ತೀರಿಸಿಕೊಂಡ ಆರ್ಸಿಬಿ