ETV Bharat / state

ಹಾವೇರಿ ಆಟೋ ಚಾಲಕರ ಸಂಘದಿಂದ ಶಂಕರ್​ನಾಗ್ ಜನ್ಮ ದಿನಾಚರಣೆ.. ಗ್ರಾಹಕರನ್ನು ದೇವರಂತೆ ಕಾಣುವ ವಾಗ್ದಾನ

author img

By

Published : Nov 9, 2022, 6:08 PM IST

ಹಾವೇರಿ ಕೇಂದ್ರ ಬಸ್ ನಿಲ್ದಾಣದ ಆಟೋ ಚಾಲಕರ ಸಂಘದ ವತಿಯಿಂದ ಶಂಕರ್​​ನಾಗ್​​ ಜನ್ಮದಿನ ಆಚರಿಸಲಾಯಿತು.

Shankar nag birthday celebration from haveri fans
ಅಭಿಮಾನಿಗಳಿಂದ ಶಂಕರ್​​ನಾಗ್​​ ಜನ್ಮ ದಿನಾಚರಣೆ

ಹಾವೇರಿ: ಇಂದು ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ ಶಂಕರ್​ನಾಗ್​​ ಜನ್ಮದಿನ. ಇಂದು ಅವರು ನಮ್ಮೊಂದಿಗಿದ್ದಿದ್ದರೆ 68ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಹಾವೇರಿ ಕೇಂದ್ರ ಬಸ್ ನಿಲ್ದಾಣದ ಆಟೋ ಚಾಲಕರ ಸಂಘದ ವತಿಯಿಂದ ಶಂಕರ್​​ನಾಗ್​​ ಜನ್ಮದಿನಾಚರಣೆ ನಡೆಯಿತು.

ಕೇಂದ್ರ ಬಸ್ ನಿಲ್ದಾಣದ ಆಟೋ ಸ್ಟ್ಯಾಂಡ್ ಅನ್ನು ಹೂವು, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಸ್ಟ್ಯಾಂಡ್‌ನಲ್ಲಿ ಶಂಕರ್​ ನಾಗ್ ನಟಿಸಿದ ಚಲನ ಚಿತ್ರಗಳ ಹಾಡುಗಳು ಮಾರ್ದನಿಸಿದವು. ಶಂಕರ್​​​ನಾಗ್ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಲಾಯಿತು.

ನಂತರ ಅಭಿಮಾನಿಗಳು ಕೇಕ್ ಕತ್ತರಿಸಿ ಜನ್ಮದಿನ ಆಚರಿಸಿದರು. ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಉಪಹಾರದ ವ್ಯವಸ್ಥೆಯನ್ನು ಅಭಿಮಾನಿಗಳ ಸಂಘ ಮಾಡಿತ್ತು. ಪ್ರಯಾಣಿಕರಿಗೆ, ಅಭಿಮಾನಿಗಳಿಗೆ ಪಲಾವ್ ಮತ್ತು ಸಿಹಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಂಕರ್​ನಾಗ್​​ ಅಭಿಮಾನಿಗಳ ಸಂಘದ ಸದಸ್ಯರು, ಶಂಕರ್​​ನಾಗ್ ಕನ್ನಡ ನಾಡು ಕಂಡ ಅಪ್ರತಿಮ ನಟ. ರಂಗಭೂಮಿ ಚಲನಚಿತ್ರ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ನಿರ್ದೇಶಕ, ನಟನಾಗಿ ಗುರುತಿಸಿಕೊಂಡಿದ್ದ ಅವರು ಬಹುಬೇಗ ನಮ್ಮನ್ನಗಲಿದ್ದು ದುರ್ದೈವದ ಸಂಗತಿ ಎಂದರು.

ಇದನ್ನೂ ಓದಿ: ಅಭಿಮಾನಿಗಳ ಆಟೋರಾಜ ಶಂಕ್ರಣ್ಣರ ಜನ್ಮದಿನ.. ಸಾಂಗ್ಲಿಯಾನ 2 ರೀ ರಿಲೀಸ್​

ಕಳೆದ ಐದು ವರ್ಷಗಳಿಂದ ಹಾವೇರಿಯಲ್ಲಿ ಕೇಂದ್ರ ಬಸ್ ನಿಲ್ದಾಣದ ಆಟೋ ಚಾಲಕರ ಸಂಘ ಶಂಕರ್​​ನಾಗ್ ಜನ್ಮದಿನ ಆಚರಿಸಿಕೊಂಡು ಬರುತ್ತಿದೆ. ಪ್ರತಿ ವರ್ಷ ಶಂಕರ್​​ನಾಗ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನಂತರ ಕೇಕ್ ಕಟ್ ಮಾಡಿ ಸಂಭ್ರಮಿಸಲಾಗುತ್ತದೆ. ಮುಂದೆಯೂ ಸಹ ತಮ್ಮ ಮೆಚ್ಚಿನ ನಟನ ಜನ್ಮದಿನ ಆಚರಿಸುವುದಾಗಿ ತಿಳಿಸಿದರು.

ಆಟೋ ಚಾಲಕರಿಗೆ ಗೌರವ ತಂದುಕೊಟ್ಟ ಶಂಕರ್​​ನಾಗ್ ನಮ್ಮ ಜೊತೆ ಯಾವಾಗಲೂ ಇರುತ್ತಾರೆ. ಅವರ ಆದರ್ಶ ನಮಗೆ ಮಾರ್ಗದರ್ಶಿಯಾಗಿದ್ದು, ಗ್ರಾಹಕರನ್ನು ದೇವರಂತೆ ನೋಡುತ್ತೇವೆ ಎಂದು ವಾಗ್ದಾನ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.