ಹಾವೇರಿ: ನಿರುದ್ಯೋಗ ಸಮಸ್ಯೆ ನಿವಾರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಕಾಂಗ್ರೆಸ್ ಮುಖಂಡ ಪ್ರಕಾಶ್ ಕೋಳಿವಾಡ್ ಆರೋಪಿಸಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರಲ್ಲಿ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆಯಿಂದ ವಿದ್ಯಾರ್ಥಿಗಳು ಆತ್ಮಹತ್ಯೆಯತ್ತ ಮುಖಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಣೆಬೆನ್ನೂರನ್ನು ನಿರುದ್ಯೋಗ ಮುಕ್ತ ಮಾಡಲು ಅಭಿಯಾನ ಕೈಗೊಂಡಿದ್ದೇನೆ. ಮಿಷನ್ 2028 ರೊಳಗೆ ರಾಣೆಬೆನ್ನೂರು ತಾಲೂಕನ್ನು ನಿರುದ್ಯೋಗ ಮುಕ್ತ ಮಾಡುವುದಾಗಿ ತಿಳಿಸಿದರು.
ಈಗಾಗಲೇ ಹಲವು ಬಾರಿ ಉದ್ಯೋಗ ಮೇಳ ನಡೆಸಿದ್ದು, ಹಲವು ಕಂಪನಿಗಳ ಜೊತೆ ಸಂಪರ್ಕ ಇದೆ. ಈ ಹಿನ್ನೆಲೆಯಲ್ಲಿ ಬಯೋಡೇಟಾ ಕೊಡಿ ಕೆಲಸ ತಗೊಳ್ಳಿ ಎಂಬ ಅಭಿಯಾನ ಆರಂಭಿಸಿದ್ದೇವೆ. ರಾಣೆಬೆನ್ನೂರು ನಗರದಲ್ಲಿರುವ 35 ವಾರ್ಡ್‌ಗಳಲ್ಲಿ 83 ಗ್ರಾಮಗಳಲ್ಲಿ ಈ ಅಭಿಯಾನ ಆರಂಭಿಸಿದ್ದೇವೆ. ಈ ಅಭಿಯಾನ 45 ದಿನಗಳ ಕಾಲ ರಾಣೆಬೆನ್ನೂರು ತಾಲೂಕಿನಲ್ಲಿರಲಿದೆ. ಬಯೋಡೇಟಾ ಕೊಟ್ಟು ಯುವಕ ಯುವತಿಯರು ಕೆಲಸ ಪಡೆದುಕೊಳ್ಳುವಂತೆ ತಿಳಿಸಿದರು.
ಇದನ್ನೂ ಓದಿ: ಯಾವುದೇ ಶ್ರೀಗಳ ಬಗ್ಗೆ ಹಗುರ ಮಾತು ಬೇಡ: ಯತ್ನಾಳ್ ವಿರುದ್ಧ ಸಚಿವ ಮುರುಗೇಶ್ ನಿರಾಣಿ ಪರೋಕ್ಷ ವಾಗ್ದಾಳಿ