ಹಾವೇರಿ : ರಾಜ್ಯದಲ್ಲಿ ಸರ್ಕಾರ, ಪೊಲೀಸ್ ಇಲಾಖೆ ಇದೆ. ತನಿಖೆ ಸರಿಯಾಗಿ ಮಾಡಬೇಕು. ಯಾರು ಡ್ರಗ್ಸ್ ಸರಬರಾಜು ಮಾಡ್ತಾರೆ, ಯಾರು ಉಪಯೋಗ ಮಾಡ್ತಾರೆ. ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ರೂ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ಯಾರಿಗೂ ಅನ್ಯಾಯ ಆಗದಂತೆ ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಯಾರ ಸಪೋರ್ಟ್ ಇಲ್ಲದೇ ಇಂಥಾ ಕೆಲಸ ಮಾಡಲು ಆಗೋದಿಲ್ಲ. ಸರ್ಕಾರಕ್ಕೆ ಗೊತ್ತಿರದ ವಿಚಾರ ಯಾವುದೂ ಇಲ್ಲ. ಸರ್ಕಾರ ಈಗಲಾದ್ರೂ ಎಚ್ಚೆತ್ತು ಕಠಿಣ ಕ್ರಮಕೈಗೊಳ್ಳಬೇಕು. ಇದಕ್ಕೆ ಮೆಡಿಕಲ್ ಕಾಲೇಜ್, ಇಂಜಿನಿಯರ್ ಕಾಲೇಜು ವಿದ್ಯಾರ್ಥಿಗಳು ಬಲಿ ಆಗ್ತಿದ್ದಾರೆ ಎಂದರು. ಡ್ರಗ್ಸ್ ಸರಪಳಿ ಕಟ್ ಮಾಡಬೇಕು ಎಂದು ಒತ್ತಾಯಿಸಿದರು.
ಬೆಳಗಾವಿಯಲ್ಲಿ ಎಂಇಎಸ್ ಅಸ್ತಿತ್ವ ಕಡಿಮೆ ಆಗಿದೆ. ಅಸ್ತಿತ್ವ ಉಳಿಸಿಕೊಳ್ಳಲು ಅವರು ಮರಾಠಿ-ಕನ್ನಡ ಭಾಷೆ ಡಿವೈಡ್ ಮಾಡೋ ಕೆಲಸ ಮಾಡ್ತಿದ್ದಾರೆ. ಬೆಳಗಾವಿಯಲ್ಲಿ ಮೊದಲು ಐದು ಜನ ಎಂಇಎಸ್ ಶಾಸಕರು ಗೆಲ್ತಿದ್ರು. ಈಗ ಆ ಪರಿಸ್ಥಿತಿ ಇಲ್ಲ. ಸಮಯ ಸಿಕ್ಕಾಗ ಅಸ್ತಿತ್ವ ಉಳಿಸಿಕೊಳ್ಳೋಕೆ ಕೈ ಹಾಕ್ತಾರೆ.
ಅದಕ್ಕೆ ಹೆಚ್ಚಿನ ಒತ್ತು ಕೊಡೋ ಅಗತ್ಯವಿಲ್ಲ ಎಂದರು. ನಮ್ಮ ವಾಲ್ಮೀಖಿ ಸಮುದಾಯ 40 ವರ್ಷಗಳಿಂದ ಮೀಸಲಾತಿ ಹೆಚ್ಚಳದ ಹೋರಾಟ ಮಾಡ್ತಿದೆ. ಸಂವಿಧಾನಬದ್ಧ ಶೇ.7.5 ಮೀಸಲಾತಿ ಸಿಗಬೇಕಾಗಿರೋದು ಹಕ್ಕದು. ಸಿಎಂ ಭೇಟಿಗೆ ಇವತ್ತಿನ ಸಭೆಯಲ್ಲಿ ನಿರ್ಧರಿಸಲಾಗಿದೆ. ಆದಷ್ಟು ಬೇಗ ಸಿಎಂ ಭೇಟಿ ಮಾಡಿ ಮೀಸಲಾತಿ ಹೆಚ್ಚಳ ಜಾರಿಗೆ ಒತ್ತಾಯ ಮಾಡುತ್ತೇವೆ ಎಂದು ಇದೇ ವೇಳೆ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.