ETV Bharat / state

ಒಂದೇ ದಿನ 2 ಪರೀಕ್ಷೆ: ಗೊಂದಲದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು - kannadanews

ಜೂನ್​ 23 ರಂದು ಸರ್ಕಾರ ಒಂದೇ ದಿನ ಎರಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿ ಪಡಿಸಿದ್ದು, ಸರ್ಕಾರಿ ಉದ್ಯೋಗಾಕಾಂಕ್ಷಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಗೊಂದಲದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು
author img

By

Published : Jun 17, 2019, 2:25 PM IST

ಹಾವೇರಿ : ಜೂನ್​ 23 ರಂದು ಸರ್ಕಾರ ಒಂದೇ ದಿನ ಎರಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿಪಡಿಸಿದ್ದು, ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಗೊಂದಲಕ್ಕೀಡಾಗಿದ್ದಾರೆ.

ಗೊಂದಲದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು

ಇದೇ 23 ರಂದು ಒಂದೇ ದಿನ ಪಿಡ್ಬ್ಲ್ಯೂಡಿ ಇಲಾಖೆ ಮತ್ತು ಕಾರಾಗೃಹ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆ ನಿಗದಿ ಪಡಿಸಲಾಗಿದ್ದು, ಪರೀಕ್ಷೆಯನ್ನ ಒಂದೇ ದಿನ ಇಟ್ಟಿದ್ದರಿಂದ ಎರಡು ಇಲಾಖೆಯಲ್ಲಿ ಪರೀಕ್ಷೆ ಬರೆಯುವ ಹಲವು ಅಕಾಂಕ್ಷೆಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಹಾವೇರಿಯಲ್ಲಿ ವಿದ್ಯಾರ್ಥಿ ಬಸವರಾಜ್ ಈ ರೀತಿ ಒಂದೇ ದಿನ ಪರೀಕ್ಷೆ ಇಟ್ಟಿರುವುದರಿಂದ ನಮಗೆ ಎರಡು ಪರೀಕ್ಷೆಗಳಲ್ಲಿ ಬರೆಯುವ ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಸರ್ಕಾರ ಎರಡು ಇಲಾಖೆಗಳ ಪರೀಕ್ಷೆಗಳನ್ನು ಬೇರೆ ಬೇರೆ ದಿನಾಂಕದಂತೆ ನಿಗದಿ ಮಾಡಬೇಕು. ಆ ಮೂಲಕ ನಿರುದ್ಯೋಗಿಗಳ ನೆರವಿಗೆ ಧಾವಿಸಬೇಕು ಎಂದು ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಒತ್ತಾಯಿಸಿದ್ದಾರೆ.

ಹಾವೇರಿ : ಜೂನ್​ 23 ರಂದು ಸರ್ಕಾರ ಒಂದೇ ದಿನ ಎರಡು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿಗದಿಪಡಿಸಿದ್ದು, ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಗೊಂದಲಕ್ಕೀಡಾಗಿದ್ದಾರೆ.

ಗೊಂದಲದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು

ಇದೇ 23 ರಂದು ಒಂದೇ ದಿನ ಪಿಡ್ಬ್ಲ್ಯೂಡಿ ಇಲಾಖೆ ಮತ್ತು ಕಾರಾಗೃಹ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆ ನಿಗದಿ ಪಡಿಸಲಾಗಿದ್ದು, ಪರೀಕ್ಷೆಯನ್ನ ಒಂದೇ ದಿನ ಇಟ್ಟಿದ್ದರಿಂದ ಎರಡು ಇಲಾಖೆಯಲ್ಲಿ ಪರೀಕ್ಷೆ ಬರೆಯುವ ಹಲವು ಅಕಾಂಕ್ಷೆಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಹಾವೇರಿಯಲ್ಲಿ ವಿದ್ಯಾರ್ಥಿ ಬಸವರಾಜ್ ಈ ರೀತಿ ಒಂದೇ ದಿನ ಪರೀಕ್ಷೆ ಇಟ್ಟಿರುವುದರಿಂದ ನಮಗೆ ಎರಡು ಪರೀಕ್ಷೆಗಳಲ್ಲಿ ಬರೆಯುವ ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಸರ್ಕಾರ ಎರಡು ಇಲಾಖೆಗಳ ಪರೀಕ್ಷೆಗಳನ್ನು ಬೇರೆ ಬೇರೆ ದಿನಾಂಕದಂತೆ ನಿಗದಿ ಮಾಡಬೇಕು. ಆ ಮೂಲಕ ನಿರುದ್ಯೋಗಿಗಳ ನೆರವಿಗೆ ಧಾವಿಸಬೇಕು ಎಂದು ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಒತ್ತಾಯಿಸಿದ್ದಾರೆ.

Intro:ವಿಜಯಪುರ Body:ವಿಜಯಪುರ : ಸಾಮಾನ್ಯವಾಗಿ ಯಾರಾದ್ರೂ ತಪ್ಪು ಮಾಡಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡ್ರೆ ಮಾತ್ರ ಕೈಗೆ ಕೋಳ ಬೀಳುತ್ತೆ. ಹಾಗೆ ಬೇಡಿ ತೊಟ್ಟು ಅರೆಸ್ಟ್ ಆದವರು ಜಾಮೀನಿನ ಮೇಲೆ ಬಿಡುಗಡೆಯಾಗಬಹುದು. ಆದ್ರೆ ಇಲ್ಲಿ ಒಮ್ಮೆ ಬೇಡಿ ಬಿದ್ರೆ ಮುಗೀತು, ಯಾವ ಕೋರ್ಟ್, ಕಚೇರಿ ಏನು ಮಾಡೋಕಾಗಲ್ಲ, ಇವರಿಗೆ ಬಿದ್ದ ಬೇಡಿ ಕಳಚಬೇಕಂದ್ರೆ ಸಾಕ್ಷಾತ ಆ ದೇವರ ಅಪ್ಪಣೆಯೇ ಆಗಬೇಕು. ಹೌದು ಅಚ್ಚರಿಯಾದರೂ ಸತ್ಯ, ಇಂಥದ್ದೊಂದು ಸಂಪ್ರದಾಯ ನೂರಾರು ವರ್ಷಗಳಿಂದ ಸದ್ದಿಲ್ಲದೇ ನಡೆದುಕೊಂಡು ಬರುತ್ತಿದೆ. ಇಲ್ಲಿನ ಕುಟುಂಬದಲ್ಲಿ ಮದುವೆಯಾದರೆ ಸಾಕು ಇಡೀ ಮನೆ ಮಂದಿಯೆಲ್ಲಾ ಕಾಲಿಗೆ ಕೋಳ ಹಾಕಿಕೊಳ್ತಾರೆ. ಕಬ್ಬಿಣದ ಸರಳುಗಳ ಕೋಳ ಕಳಚುವವರೆಗೂ ಇವರು ಮನೆಗೆ ಹೋಗದೆ ದೇವರ ಕೃಪೆಗಾಗಿ ದೇವಸ್ಥಾನದಲ್ಲೇ ಕಾಯ್ತಾರೆ. ಮದುವೆಯಾದ ಬಳಿಕ ಇಡೀ ಕುಟುಂಬವೇ ಕಾಲಿಗೆ ಕೋಳ ಕಟ್ಟಿಕೊಂಡು ದೇವರ ಅಪ್ಪಣೆಗಾಗಿ ಕಾಯುವಂತಹ ವಿಚಿತ್ರ ಸ್ಟೋರಿ ಇಲ್ಲಿದೆ ನೋಡಿ.
 ಹೀಗೆ ಎರಡೂ ಕಾಲುಗಳಿಗೆ ಬೇಡಿ ತೊಟ್ಟ ಇವರೆಲ್ಲ ದೇವಸ್ಥಾನದಲ್ಲೇ ವಾಸ್ತವ್ಯ ಹೂಡಿದ್ದಾರೆ. ಕಳೆದ 15 ದಿನಗಳಿಂದ ಕಾಲಿಗೆ ಕಬ್ಬಿಣದ ಸಣ್ಣ ಸರಳಿನಿಂದ ಮಾಡಿದ ಬೇಡಿ ಕಟ್ಟಿಕೊಂಡು ದೇವಸ್ಥಾನದಲ್ಲೇ ಅಡ್ಡಾಡುತ್ತಿದ್ದಾರೆ. ಎಷ್ಟೇ ದಿನಗಳಾಗಲಿ ಬೇಡಿ ತನ್ನಿಂತಾನೆ ಕಳಚುವವರೆಗೂ ಮನೆಗೆ ಹೋಗುವಂತಿಲ್ಲ. ಇಂತಹ ವಿಚಿತ್ರ ಆಚರಣೆ ಕಂಡುಬಂದಿದ್ದು ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಯಂಕಂಚಿ ಗ್ರಾಮದಲ್ಲಿ. ಗ್ರಾಮದ ದಾವಲ್‌ಮಲ್ಲಿಕ್ ದೇವಸ್ಥಾನದ ಅರ್ಚಕರಾದ ಮುಜಾವರ ಕುಟುಂಬ ಸದ್ಯ ಬೇಡಿ ಹಾಕಿಕೊಂಡು ದೇವರ ಅಪ್ಪಣೆಗಾಗಿ ಕಾಯುತ್ತಿರುವವರು. ದಾವಲ್‌ಮಲ್ಲಿಕ್ ಮುಸ್ಲಿಂ ದೇವರಾದರೂ ಇಲ್ಲಿ ಹಾಲುಮತಸ್ಥ ಸಮುದಾಯದ ಮುಜಾವರ ಕುಟುಂಬವೇ ಅರ್ಚಕರಾಗಿದ್ದಾರೆ. ಈಗಾಗಲೇ 6 ಜನರ ಬೇಡಿ ಕಳಚಿದ್ದು ಇನ್ನುಳಿದ 18 ಜನ ದೇವರ ಕೃಪೆಗಾಗಿ ಕಾದಿದ್ದಾರೆ. ಯಂಕಂಚಿ ಗ್ರಾಮದ ಮುಜಾವರ ಕುಟುಂಬ, ಕುಲಕರ್ಣಿ ಮತ್ತು ಗೌಡ್ರ ಸಮುದಾಯದಲ್ಲಿ ಈ ಬೇಡಿ ಸಂಪ್ರದಾಯ ಹಾಸುಹೊಕ್ಕಾಗಿದೆ. ಮನೆಯಲ್ಲಿ ಗಂಡು ಮಕ್ಕಳಿಗೆ ಮದುವೆಯಾದರೆ ಮನೆ ಮಂದಿ ಎಲ್ಲಾ ಕೋಳ ಕಟ್ಟಿಕೊಂಡು ದಾವಲ್‌ಮಲ್ಲಿಕ್ ದೇವಸ್ಥಾನದಲ್ಲೇ ವಾಸ್ತವ್ಯ ಹೂಡುತ್ತಾರೆ. ಬೇಡಿ ತನ್ನಿಂದ ತಾನೆ ಕಳಚುವವರೆಗೂ ಇಡೀ ಕುಟುಂಬ ದೇವಸ್ಥಾನ ತೊರೆಯಲ್ಲ. ಅದು ವಾರ, ತಿಂಗಳು ಎಷ್ಟೇ ವರ್ಷವಾದರೂ ಸರಿ. ತಾವೇ ತಾವಾಗಿ ಬೇಡಿ ಬಿಚ್ಚುವಂತಿಲ್ಲ. ದೇವರೇ ಅದನ್ನು ಕಳಚಬೇಕು.
ಇವರ ಕಾಲಿನ ಬೇಡಿ ಕಳಚಿ ಇವರು ಮನೆಗೆ ಹೋಗುವ ವರೆಗೂ ಇವರ ಮನೆಯಲ್ಲಿ ಸಂಭಂಧಿಕರು ಬಂದು ವಾಸವಿದ್ದು, ಇವರ ಮನೆಯನ್ನು ಕಾವಲು ಮಾಡ್ತಾರೆ, ಜಾನುವಾರು, ಜಮೀನು ನೋಡಿಕೊಳ್ತಾರೆ. ಕಳೆದ ಮೇ 24ರಂದು ಮುಜಾವರ ಕುಟುಂಬದಲ್ಲಿ ಒಟ್ಟಿಗೆ ಎಂಟು ಯುವಕರಿಗೆ ಮದುವೆ ಮಾಡಲಾಗಿದೆ. ಮದುವೆಯಾದ ಐದನೇ ದಿನಕ್ಕೆ ದೇವಸ್ಥಾನಕ್ಕೆ ಬಂದು ಗ್ರಾಮದ ಪಂಚಾಯಿತಿ ಇಂದ ಬೇಡಿ ಕಟ್ಟಿಸಿಕೊಳ್ಳಲಾಗುತ್ತದೆ. ಹೆಣ್ಣು ಮಕ್ಕಳಿಗೆ ಹೂವಿನಿಂದಾದ ಬೇಡಿ ಹಾಕುತ್ತಾರೆ. ಪ್ರತಿದಿನ ಬೆಳಗ್ಗೆ ಗ್ರಾಮದಲ್ಲಿ ಕಂತಿಭಿಕ್ಷೆ ಬೇಡಿಯೇ ಪ್ರಸಾದ ಸೇವಿಸುತ್ತಾರೆ. ರಾತ್ರಿ ದೇವಸ್ಥಾನದಲ್ಲೇ ವಾಸ್ತವ್ಯ. ಹೀಗೆ ಬೇಡಿ ಹಾಕಿಕೊಂಡವರು ತಿಂಗಳ ಮೇಲೆ ಇಲ್ಲಿಲ್ಲ. ಅಷ್ಟರಲ್ಲಿ ಹೇಗೂ ತನ್ನಿಂತಾನೇ ಬೇಡಿ ಕಳಚಲೇ ಬೇಕು.ಅದು ದೇವರ ಪವಾಡ ಎನ್ನುತ್ತಾರೆ ಅರ್ಚಕರು.
 ಇನ್ನು ಈ ಬೇಡಿ ಆಚರಣೆ ಹೇಗೆ ಬಂತು ಎಂದು ನೋಡುವುದಾದ್ರೆ ಆಂಗ್ಲರ ಆಳ್ವಿಕೆಯಲ್ಲಿ ವಿಜಯಪುರ ಬದಲು ಕಲಾದಗಿ ಜಿಲ್ಲೆಯಾಗಿತ್ತು. ಕಂದಾಯ ಸರಿಯಾಗಿ ಕಟ್ಟಲಿಲ್ಲ ಎಂಬ ಕಾರಣಕ್ಕೆ ಬ್ರಿಟಿಷರು ಗ್ರಾಮದ ಗೌಡರು, ಕುಲಕರ್ಣಿಗಳನ್ನು ಕಲಾದಗಿಯ ಜೈಲಿಗೆ ಕರೆದೊಯ್ದಿರುತ್ತಾರೆ. ಆಗ ವಾಲೀಕಾರರಾಗಿದ್ದ ಈಗಿನ ಮುಜಾವರ ಕುಟುಂಬದ ಹಿರಿಯ ಹೊನ್ನಜಾಂಜಪ್ಪ ಜೈಲಿಗೆ ಅವರಿಗೆ ಕಾಣಲೆಂದು ಹೋಗಿರುತ್ತಾರೆ. ಆಗ ಅಲ್ಲೇ ಹತ್ತಿರದಲ್ಲೊಂದು ದಾವಲ್ ಮಲಿಕ್‌ರ ಪಾಳು ಬಿದ್ದ ಗುಡಿ ಇರಲಾಗಿ ಅಲ್ಲಿ ರಾತ್ರಿ ತಂಗುತ್ತಾರೆ. ಆಗ ಆತ ದೇವರೇ ನಮಗೆ ಈ ಸರ್ಕಾರದ ಬೇಡಿ ಬೇಡ, ಬೇಕಿದ್ದರೆ ನಿನ್ನ ಬೇಡಿ ತೊಡಿಸು ಎಂದು ಪ್ರಾರ್ಥನೆ ಮಾಡುತ್ತಾರೆ, ಬಳಿಕ ಕನಸಿನಲ್ಲಿ ಬಂದ ದಾವಲ್‌ಮಲ್ಲಿಕ್‌ರು ಜೈಲಿನ ಕಚೇರಿಯಲ್ಲೊಂದು ಕುದುರೆಯಿದ್ದು ಅದನ್ನು ಯಾರೂ ಪಳಗಿಸಲಾಗಿಲ್ಲ, ಅದನ್ನು ನೀನು ಪಳಗಿಸಿದರೆ ಬ್ರಿಟಿಷರು ಕುದುರೆಯೊಂದಿಗೆ ನೀನು ಬೇಡಿದ್ದನ್ನು ನೀಡಲಿದ್ದಾರೆ ಎನ್ನುತ್ತಾರೆ. ಆದರೆ, ಕುದುರೆ ಪಳಗಿಸುವ ಶಕ್ತಿ ತಮ್ಮಲಿಲ್ಲವೆನ್ನಲಾಗಿ ದಾವಲ್‌ಮಲ್ಲಿಕ್‌ರು ಆ ಶಕ್ತಿ ನಿನಗೆ ಸಿಕ್ಕಿದೆ ಹೋಗೆನ್ನುತ್ತಾರೆ. ಅದರಂತೆ ಹೊನ್ನಜಾಂಜಪ್ಪ ಕುದುರೆ ಪಳಗಿಸಲಾಗಿ ಅಂದುಕೊಂಡಂತೆ ಕುಲಕರ್ಣಿ ಹಾಗೂ ಗೌಡರು ಬಿಡುಗಡೆಗೊಳ್ಳುತ್ತಾರೆ. ಮರಳಿ ಬರುವಾಗ ಎಲ್ಲರೂ ದೇವರ ದರ್ಶನ ಪಡೆದು ಇನ್ಮುಂದೆ ನಿನಗಾಗಿ ಬೇಡಿ ಹಾಕಿಕೊಳ್ಳುತ್ತೇವೆಂದು ಬೇಡಿಕೊಳ್ಳುತ್ತಾರೆ.ಅಂದಿನಿಂದ ಈ ಸಂಪ್ರದಾಯ ಮುಂದುವರಿದಿದೆ ಎನ್ನುವ ಪ್ರತೀತಿ ಇದೆ.
 ದೇವರ ಮೇಲಿನ ಅಪಾರ ನಂಬಿಕೆಯಿಂದಾಗಿ ಹೊನ್ನಜಾಂಜಪ್ಪ ಯಂಕಂಚಿಯಿಂದ ಕಲಾದಗಿಯ ದರ್ಗಾದವರೆಗೆ ದೀರ್ಘದಂಡ ನಮಸ್ಕಾರ ಹಾಕುತ್ತಾರೆ. ಆಗ ದೇವರು ಮತ್ತೆ ಕನಸಿನಲ್ಲಿ ಬಂದು ಇಲ್ಲಿವರೆಗೆ ನೀನು ಬರುವುದೇ ಬೇಡ. ನಾನೇ ನೀನಿದ್ದಲ್ಲಿಗೆ ಬರುತ್ತೇನೆ. ಗ್ರಾಮದ ಹೊರ ವಲಯದಲ್ಲಿರುವ ಗಿಡದ ಕೆಳಗೆ ಐದು ಮಲ್ಲಿಗೆ ಹೂವು ಮತ್ತು ಊದುಬತ್ತಿ ಹೊಗೆಯಾಡುತ್ತಿರುವ ಜಾಗೆ ಮುಂಭಾಗದಲ್ಲಿ ನಾನಿರುತ್ತೇನೆ ಎನ್ನುತ್ತಾನೆ. ಅದೇ ರೀತಿ ಗ್ರಾಮಕ್ಕೆ ಬಂದು ನೋಡಲಾಗಿ ಈಗಿರುವ ದೇವಸ್ಥಾನದ ಹಿಂಬದಿಯ ಜಾಗೆಯಲ್ಲಿ ಆ ದೃಶ್ಯ ಗೋಚರಿಸುತ್ತದೆ.ಅಂದಿನಿಂದ ದಾವಲ್ ಮಲ್ಲಿಕ್‌ರ ಪವಾಡಗಳು ನಡೆದುಕೊಂಡೇ ಬಂದಿವೆ ಎಂಬ ನಂಬಿಕೆ ಇವರದ್ದಾಗಿದೆ.Conclusion:ವಿಜಯಪುರ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.