ಹಾವೇರಿ: ಕಿರಾಣಿ ಅಂಗಡಿಯ ಮೇಲ್ಛಾವಣಿ ತೆಗೆದು ಖದೀಮರಿಬ್ಬರು ಅಂಗಡಿಯೊಳ ನುಗ್ಗಿ 3 ಸಾವಿರ ರೂಪಾಯಿ ನಗದು ಹಾಗೂ ದಿನಸಿ ವಸ್ತುಗಳನ್ನು ದೋಚಿಕೊಂಡು ಹೋದ ಘಟನೆ ಹಾವನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮದರಸಾಬ ಕಲಾರಿ ಎಂಬುವವರ ಅಂಗಡಿಯಲ್ಲಿ ತಡರಾತ್ರಿ ಕಳ್ಳತನ ನಡೆದಿದೆ.
ಖದೀಮರ ಕಳ್ಳತನದ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಕರಣದಲ್ಲಿ ಬಾಗಿಯಾದವರು ಇದೇ ಅಂಗಡಿಗೆ ಕಳೆದ ಕೆಲವು ದಿನಗಳ ಹಿಂದೆಯೂ ಕನ್ನ ಹಾಕಿದ್ದು 30 ಸಾವಿರ ರುಪಾಯಿ ನಗದು ಎಗರಿಸಿದ್ದರು.

ಸ್ಥಳಕ್ಕೆ ಗುತ್ತಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.