ರಾಣೆಬೆನ್ನೂರು: ಅಕ್ರಮವಾಗಿ ಶೇಖರಿಸಿದ್ದ 6 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಆಹಾರ ಹಾಗೂ ಪೊಲೀಸ್ ಇಲಾಖೆ ದಾಳಿ ನಡೆಸಿ ಅಕ್ಕಿ ವಶಪಡಿಸಿಕೊಂಡು, ಮೂವರ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.

ರಾಣೆಬೆನ್ನೂರು ನಗರದ ಕಂಚಗಾರ ಓಣಿಯ ಈರಣ್ಣ ಕಿತ್ತೂರ ಎಂಬುವರ ಮನೆಯಲ್ಲಿ ಪಡಿತರ ಚೀಟಿ ಅಡಿಯಲ್ಲಿ ನೀಡುವ ಅಕ್ಕಿಯನ್ನು ಸಾರ್ವಜನಿಕರಿಂದ ತಮ್ಮ ಲಾಭಕ್ಕಾಗಿ ಖರೀದಿಸಿ ಸಂಗ್ರಹಣೆ ಮಾಡಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಮತ್ತು ಆಹಾರ ಇಲಾಖೆ ಸಿಬ್ಬಂದಿ ದಾಳಿ ಮಾಡಿ ಸುಮಾರು 6 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಂಡಿದ್ದಾರೆ.

ದಾಸ್ತಾನು ಮಾಡಿದ್ದ ಈರಣ್ಣ ಅಶೋಕ ಕಿತ್ತೂರ, ದೀಪು ಹಾಗೂ ಚಂದ್ರು ಬಲ್ಲೂರ ಎಂಬ ವ್ಯಕ್ತಿಗಳ ಮೇಲೆ ರಾಣೆಬೆನ್ನೂರು ಶಹರ ಪೊಲೀಸ್ ಠಾಣೆಯಲ್ಲಿ ಆಹಾರ ಇಲಾಖೆ ಸಿಬ್ಬಂದಿ ಸ್ಟಿವನ್ ಚಂದ್ರಕಾಂತ ಪ್ರಕರಣ ದಾಖಲಿಸಿದ್ದಾರೆ.
