ಹಾವೇರಿ: ಜಿಲ್ಲೆಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿದ್ದು, ಬಹುತೇಕ ಅಂಗಡಿಗಳು ಬಾಗಿಲು ತೆರೆದಿವೆ. ಎಂದಿನಂತೆ ವ್ಯಾಪಾರ ವಹಿವಾಟು ನಡೆಯುತ್ತಿದೆ.
ಜಿಲ್ಲೆಯಲ್ಲಿ ಸಾರಿಗೆ ಬಸ್ ಸಂಚಾರ ಆರಂಭವಾಗಿದ್ದು, ಜಿಲ್ಲೆಯ ಒಳಗಡೆ ಮಾತ್ರ ಬಸ್ಗಳು ಸಂಚಾರ ಮಾಡ್ತಿವೆ. ಕೆಲವೇ ಕೆಲವು ಜನರನ್ನ ಹೊರತುಪಡಿಸಿದ್ರೆ ಬಹುತೇಕ ಜನರು ಮಾಸ್ಕ್ ಧರಿಸಿಕೊಂಡು ಓಡಾಡ್ತಿದ್ದಾರೆ.
ಎಂದಿನಂತೆ ಕಾರ್, ಬೈಕ್ಗಳು ರಸ್ತೆಗಿಳಿದು ಓಡಾಡ್ತಿವೆ. ಕೊರೊನಾ ಭೀತಿ ಇರೋದ್ರಿಂದ ಇನ್ನೂ ಸಾಕಷ್ಟು ಜನರು ಮನೆ ಬಿಟ್ಟು ಹೊರಗೆ ಓಡಾಡಲು ಹಿಂದೇಟು ಹಾಕ್ತಿದ್ದಾರೆ.