ETV Bharat / state

ಅಪರಿಚಿತ ಶವ ಪತ್ತೆ: ಕಾಲುವೆಗೆ ಇಳಿದು ಮೃತ ದೇಹ ಹೊರ ತೆಗೆದ ರಟ್ಟಿಹಳ್ಳಿ ಪಿಎಸ್​ಐ - ಕಾಲುವೆಗಿಳಿದು ಮೃತ ದೇಹ ಹೊರ ತೆಗೆದ ರಟ್ಟಿಹಳ್ಳಿ ಪಿಎಸ್​ಐ

ಕಾಲುವೆಯಲ್ಲಿ ಕಾಣಿಸಿಕೊಂಡ ಅಪರಿಚಿತ ಮಹಿಳೆ ಶವವನ್ನು ತೆಗೆಯಲು ಸ್ವತಃ ಪಿಎಸ್​​ಐ ನೀರಿಗೆ ಇಳಿಯಬೇಕಾದ ಪ್ರಸಂಗ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ನಡೆದಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

rattihalli-psi-krishnappa-taken-dead-body-out-from-the-canal
ರಟ್ಟಿಹಳ್ಳಿ ಪಿಎಸ್​ಐ
author img

By

Published : Aug 16, 2021, 9:56 PM IST

ಹಾವೇರಿ: ತುಂಗಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಕಾಣಿಸಿಕೊಂಡ ಅಪರಿಚಿತ ಮಹಿಳೆಯ ಶವವನ್ನು ಸ್ವತಃ ಪಿಎಸ್ಐ ನೀರಿಗೆ ಜಿಗಿದು ಹೊರಗೆ ತೆಗೆದ ಘಟನೆ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಕರಿ ಗ್ರಾಮದಲ್ಲಿ ನಡೆದಿದೆ.

ಕಾಲುವೆಗಿಳಿದು ಮೃತ ದೇಹ ಹೊರ ತೆಗೆದ ರಟ್ಟಿಹಳ್ಳಿ ಪಿಎಸ್​ಐ

ರಟ್ಟಿಹಳ್ಳಿ ಪಿಎಸ್ಐ ಕೃಷ್ಣಪ್ಪ ತೋಪಿನ್ ಕೆರೆಗೆ ಹಾರಿ ಮಹಿಳೆಯ ಶವ ಹೊರಗೆ ತೆಗೆದ ಪಿಎಸ್ಐ. ಕಾಲುವೆಯಲ್ಲಿ ಅತಿ ಹೆಚ್ಚು ನೀರು ಇದ್ದ ಕಾರಣ ಗ್ರಾಮಸ್ಥರು ನೀರಿಗೆ ಇಳಿಯಲು ಹಿಂದೇಟು ಹಾಕಿದರು. ಅಲ್ಲದೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹೋಗಲು ಅಡಚಣೆ ಇತ್ತು.

ಈ ಹಿನ್ನೆಲೆಯಲ್ಲಿ ಪಿಎಸ್ಐ ಕೃಷ್ಣಪ್ಪನವರೇ ಸ್ವತಃ ನೀರಿಗೆ ಹಾರಿ ಅಪರಿಚಿತ ಮಹಿಳೆಯ ಶವವನ್ನು ಹೊರ ತಗೆದಿದ್ದಾರೆ. ಪಿಎಸ್ಐ ಗೆ ಗ್ರಾಮದ ಚಂದ್ರಪ್ಪ ಎಂಬ ವ್ಯಕ್ತಿ ಸಹಾಯ ಮಾಡಿದ್ದಾನೆ. ಕೃಷ್ಣಪ್ಪ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.