ETV Bharat / state

ಮತ್ತೆ ಕೈಕೊಟ್ಟ ವರುಣ:  ಮಳೆಗಾಗಿ ಎದುರು ನೋಡುತ್ತಿದೆ ಮೆಕ್ಕೆಜೋಳ - Ranebennur maize sowing

ಮಳೆ ಬಿದ್ದಿದ್ದ ಹಿನ್ನೆಲೆ ಕಳೆದ ಹದಿನೈದು ದಿನಗಳ ಹಿಂದೆ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ಆದರೆ, ಸದ್ಯ ಬೆಳೆ ಮೊಳೆಕೆಯೊಡೆದಿದ್ದು, ಮಳೆಯಿಲ್ಲದೇ ಬತ್ತಿಹೋಗುತ್ತಿವೆ.

Ranibennur: Lack of rain put maize crop fall down
ಮತ್ತೆ ಕೈಕೊಟ್ಟ ವರುಣ: ಮಳೆಗಾಗಿ ಎದುರು ನೋಡುತ್ತಿವೆ ಮೆಕ್ಕೆಜೋಳ
author img

By

Published : Jun 11, 2020, 2:13 PM IST

ರಾಣೆಬೆನ್ನೂರು(ಹಾವೇರಿ): ಮಳೆ ಬಿದ್ದಿದ್ದ ಹಿನ್ನೆಲೆ ಕಳೆದ ಹದಿನೈದು ದಿನಗಳ ಹಿಂದೆ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ಆದರೆ, ಸದ್ಯ ಬೆಳೆ ಮೊಳೆಕೆಯೊಡೆದಿದ್ದು, ಮಳೆಯಿಲ್ಲದೇ ಬತ್ತಿಹೋಗುತ್ತಿವೆ.

ಮತ್ತೆ ಕೈಕೊಟ್ಟ ವರುಣ: ಮಳೆಗಾಗಿ ಎದುರು ನೋಡುತ್ತಿವೆ ಮೆಕ್ಕೆಜೋಳ

ಹೌದು, ರಾಣೆಬೆನ್ನೂರು ತಾಲೂಕಿನ ಮೇಡ್ಲೇರಿ ಹೋಬಳಿಯಲ್ಲಿ ರೈತರು ಮೇ ತಿಂಗಳಲ್ಲಿ ಸುರಿದ ಮಳೆಯ ಹದಕ್ಕೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಎಕರೆಗೆ ಸುಮಾರು 15 ರಿಂದ 20 ಸಾವಿರ ಖರ್ಚು ಮಾಡಿದ್ದಾರೆ. ಈಗಾಗಲೇ ಮೆಕ್ಕೆಜೋಳ ಮೊಳಕೆಯೊಡದು ಸಸ್ಯವಾಗಿದೆ. ಆದರೆ, ಮುಂಗಾರು ಕೈ ಕೊಟ್ಟಿದ್ದು ಮೆಕ್ಕೆಜೋಳ ಬೆಳೆ ಒಣಗುತ್ತಿದೆ.

ಹಲವೆಡೆ ಬಿತ್ತನೆಗೆ ಹಿಂದೇಟು:

ರಾಣೆಬೆನ್ನೂರು ತಾಲೂಕು ಸುಮಾರು 50 ಸಾವಿರ ಹೆಕ್ಟೇರ್ ಬಿತ್ತನೆ ಪ್ರದೇಶ ಹೊಂದಿದೆ. ಅದರಲ್ಲಿ ಈಗಾಗಲೇ 10 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಉಳಿದ ರೈತರು ಮಳೆಗಾಗಿ ಕಾಯುತ್ತಿದ್ದಾರೆ. ಇನ್ನೂ ಮಳೆ ಬೀಳದ ಕಾರಣ ರೈತರು ಬಿತ್ತನೆಗೆ ಹಿಂದೇಟು ಹಾಕುವಂತಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.