ETV Bharat / state

ಬೈಕ್​ ಮೇಲಿಂದ ಬಿದ್ದು ಸವಾರ ಸ್ಥಳದಲ್ಲೇ ಸಾವು

author img

By

Published : Jun 27, 2020, 3:55 PM IST

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಬೆಲೂರು ಗ್ರಾಮದ ಬಳಿ ಬೈಕ್​​ನಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ.

Died
Died

ರಾಣೆಬೆನ್ನೂರು: ಬೈಕ್​ನಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಬೆಲೂರು ಗ್ರಾಮದ ಬಳಿ ನಡೆದಿದೆ.

ಉದಗಟ್ಟಿ ಗ್ರಾಮದ ಫಕ್ಕಿರಪ್ಪ ಬಸಪ್ಪ ಕಾಳೇರ (40) ಮೃತಪಟ್ಟ ವ್ಯಕ್ತಿ. ಫಕ್ಕಿರಪ್ಪ ಉದಗಟ್ಟಿ ಗ್ರಾಮದಿಂದ ಬೆಲೂರ ಗ್ರಾಮಕ್ಕೆ ರಾತ್ರಿ ವೇಳೆ ಬೈಕ್​​ನಲ್ಲಿ ಹೋಗುತ್ತಿದ್ದಾಗ ಆಯ ತಪ್ಪಿ ಗದ್ದೆಯಲ್ಲಿ ಬಿದ್ದಿದ್ದಾರೆ. ರಾತ್ರಿ ವೇಳೆ ಯಾರೂ ನೋಡದ ಹಿನ್ನೆಲೆ ತೀವ್ರ ರಕ್ತಸ್ರಾವವಾದ ಕಾರಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮುಂಜಾನೆ ಗ್ರಾಮದ ಜನರು ವಾಕಿಂಗ್ ಹೋದ ವೇಳೆ ಅಪಘಾತವಾಗಿರುವುದು ಕಂಡು ಬಂದಿದೆ. ಈ ಕುರಿತು ರಾಣೆಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.