ರಾಣೆಬೆನ್ನೂರು (ಹಾವೇರಿ): ನಗರದ 24*7 ಕುಡಿಯುವ ನೀರಿನ ಕಳಪೆ ಕಾಮಗಾರಿ ವಿರುದ್ಧ ಹೋರಾಟ ನಡೆಸುತ್ತಿದ್ದ ನಗರಸಭಾ ಸದಸ್ಯರು 7 ದಿನಗಳ ನಂತರ ಧರಣಿ ಕೈ ಬಿಟ್ಟಿದ್ದಾರೆ.
ರಾಣೆಬೆನ್ನೂರು ನಗರದ 24*7 ಕುಡಿಯುವ ನೀರಿನ ಕಳಪೆ ಕಾಮಗಾರಿ ವಿರುದ್ಧ ನಗರಸಭಾ ಸದಸ್ಯರು ಕಳೆದ 7 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಇಂದು ನಗರ ಸಭೆ ಪೌರಾಯುಕ್ತರು ಕಾಮಗಾರಿ ಸ್ಥಗಿತಗೊಳಿಸುವುದರ ಜೊತೆಗೆ ಕಳಪೆ ಕಾಮಗಾರಿಯನ್ನು ಮೊದಲು ಸರಿಪಡಿಸುವುದಾಗಿ ಲಿಖಿತ ಪತ್ರ ನೀಡಿದ ಹಿನ್ನೆಲೆ, ಸದಸ್ಯರು 7 ದಿನಗಳ ನಂತರ ಧರಣಿ ಕೈ ಬಿಟ್ಟಿದ್ದಾರೆ. ನಗರ ಸಭೆಯ ಸಹಾಯಕ ಅಭಿಯಂತರರನ್ನು ಕಾಮಗಾರಿ ವಿಚಾರಕರನ್ನಾಗಿ ನೇಮಿಸಲಾಗಿದೆ.
ಅಧಿಕಾರಿಗಳ ಹೇಳಿಕೆಯನ್ನು ಸ್ವೀಕರಿಸಿದ ನಗರಸಭಾ ಸದಸ್ಯರು, ಅಧಿಕಾರಿಗಳು ಭರವಸೆಯನ್ನು ಮಾತ್ರ ನೀಡಬಾರದು. ಕಳಪೆ ಕಾಮಗಾರಿ ಸರಿಪಡಿಸದಿದ್ದರೆ, ಈ ಕಾಮಗಾರಿಯನ್ನು ಲೋಕಾಯುಕ್ತ ತನಿಖೆಗೆ ಆಗ್ರಹಿಸುತ್ತೇವೆ ಎಂದು ತಿಳಿಸಿದರು.