ETV Bharat / state

ಹಾವೇರಿ, ಶಿವಮೊಗ್ಗದಲ್ಲಿ ಮತ್ತೆ ಅಬ್ಬರಿಸಿದ ಮಳೆರಾಯ - ಶಿವಮೊಗ್ಗದಲ್ಲಿ ಭಾರಿ ಮಳೆ

ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲೆಯಾದ್ಯಂತ ಮತ್ತೆ ವರುಣದೇವನ ಆಗಮನವಾಗಿದ್ದು, ಸಹಜವಾಗೇ ರೈತರಲ್ಲಿ ಸಂತಸ ಮೂಡಿದೆ. ಹಾವೇರಿಯಲ್ಲಿ ಮೋಡ ಮುಸುಕಿದ ವಾತಾವರಣದ ಜೊತೆಗೆ ವರುಣ ಅಬ್ಬರಿಸುತ್ತಿದ್ದಾನೆ.

Rain
ವರುಣದೇವನ ಆಗಮನ
author img

By

Published : Sep 2, 2020, 7:19 PM IST

ಶಿವಮೊಗ್ಗ/ಹಾವೇರಿ:ಕಳೆದ ನಾಲ್ಕೈದು ದಿನಗಳಿಂದ ಬಿಡುವು ನೀಡಿದ್ದ ಮಳೆರಾಯ ಇಂದು ಮತ್ತೆ ಆಗಮಿಸಿದ್ದಾನೆ.

ಅಬ್ಬರಿಸಿದ ಮಳೆರಾಯ
ಕಳೆದ ವಾರ ಎಡೆಬಿಡದೇ ಸುರಿದಿದ್ದ ಮಳೆಯಿಂದಾಗಿ ಶಿವಮೊಗ್ಗ ನಗರದ ಕೆಲ ಬಡಾವಣೆಯ ಜನರು ಪ್ರವಾಹದ ಆತಂಕದಲ್ಲಿದ್ದರು. ಆದರೆ ಕಳೆದ ನಾಲ್ಕೈದು ದಿನಗಳಿಂದ ಮಳೆರಾಯ ಬಿಡುವು ನೀಡಿದ್ದರಿಂದ ನದಿ ಹರಿವಿನ ಪ್ರವಾಹ ಸಹ ಕಡಿಮೆ ಆಗಿತ್ತು. ಹಾಗಾಗಿ ಜನರಲ್ಲಿ ಆತಂಕ ಸಹ ಕಡಿಮೆ ಆಗಿದೆ. ಇಂದು ಜಿಲ್ಲಾದ್ಯಂತ ಉತ್ತಮ ಮಳೆಯಾಗಿದ್ದು, ಕೃಷಿಕರು ಸಂತಸಗೊಂಡಿದ್ದಾರೆ.ಇತ್ತ ಹಾವೇರಿ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ವರುಣ ಇವತ್ತು ಮತ್ತೆ ಆರ್ಭಟಿಸುತ್ತಿದ್ದಾನೆ‌. ಮೋಡ ಮುಸುಕಿದ‌ ವಾತಾವರಣದ ಜೊತೆಗೆ ಆಗಾಗ ಮಳೆ ಆಗುತ್ತಿದೆ. ಮಳೆರಾಯನ ಆಗಮನದಿಂದ ರೈತರು ಖುಷ್ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.