ETV Bharat / state

ಈ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ನನಗೆ ಮಂತ್ರಿ ಸ್ಥಾನ ಸಿಗುವ ವಿಶ್ವಾಸ ; ಆರ್.ಶಂಕರ್

ಮುಖ್ಯಮಂತ್ರಿ ಬದಲಾವಣೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಸತ್ಯಕ್ಕೆ ದೂರವಾದದ್ದು, ಯಡಿಯೂರಪ್ಪನವರನ್ನ ಶಾಸಕರೆಲ್ಲ ಸೇರಿ ಸಿಎಂ ಮಾಡಿದ್ದೇವೆ. ಅದು ಶಾಸಕರ ತೀರ್ಮಾನ. ಸಿದ್ದರಾಮಯ್ಯನವರ ತೀರ್ಮಾನ ಅಲ್ಲ..

R. Shankar Reactions About Cabinet expansion
ವಿಧಾನ ಪರಿಷತ್ ಸದಸ್ಯ ಆರ್.ಶಂಕರ್
author img

By

Published : Nov 6, 2020, 3:50 PM IST

ರಾಣೆಬೆನ್ನೂರು (ಹಾವೇರಿ) : ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಈ ಬಾರಿ ಮಂತ್ರಿ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ವಿಧಾನ ಪರಿಷತ್ ಸದಸ್ಯ ಆರ್.ಶಂಕರ್​ ಹೇಳಿದ್ದಾರೆ.

ರಾಣೆಬೆನ್ನೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಆದಾಗಲೆಲ್ಲ ಈ ಬಾರಿ ಮಂತ್ರಿ ಆಗ್ತೀರಿ ಎಂದು ನನಗೆ ಹೇಳಿ ಕಳಿಸಿದ್ದಾರೆ. ಹೀಗಾಗಿ ಆ ಭರವಸೆ ಈ ಸಾರಿ ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಮುಖ್ಯಮಂತ್ರಿ ಬದಲಾವಣೆ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಸತ್ಯಕ್ಕೆ ದೂರವಾದದ್ದು, ಯಡಿಯೂರಪ್ಪನವರನ್ನ ಶಾಸಕರೆಲ್ಲ ಸೇರಿ ಸಿಎಂ ಮಾಡಿದ್ದೇವೆ. ಅದು ಶಾಸಕರ ತೀರ್ಮಾನ. ಸಿದ್ದರಾಮಯ್ಯನವರ ತೀರ್ಮಾನ ಅಲ್ಲ. ಸಿಎಂ ಯಾವುದೇ ಕಾರಣಕ್ಕೂ ಬದಲಾವಣೆ ಆಗೋದಿಲ್ಲ. ಯಡಿಯೂರಪ್ಪನವರು ತಮ್ಮ ಅಧಿಕಾರದ ಅವಧಿ ಪೂರ್ಣಗೊಳಿಸಲಿದ್ದಾರೆ. ಮುಂದಿನ ಚುನಾವಣೆ ಸಹ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಆರ್.ಶಂಕರ್

ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನ ವಿಚಾರ‌ ಕುರಿತು ಪ್ರತಿಕ್ರಿಯಿಸಿ ತಪ್ಪು ಮಾಡಿದ್ದರೆ ಕಾನೂನು ಪ್ರಕಾರ ಅವರ ಮೇಲೆ ಕ್ರಮ ಆಗುತ್ತದೆ. ತಪ್ಪು ಮಾಡದಿದ್ದರೆ ಹೊರಗೆ ಬರ್ತಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.