ETV Bharat / state

ರಾಣೆಬೆನ್ನೂರಿನ 50 ಸಾವಿರ ಬಡ ಕುಟುಂಬಗಳಿಗೆ ಆಹಾರ ಕಿಟ್ ನೀಡಲು ಮುಂದಾದ ಆರ್.ಶಂಕರ್ - ರಾಣೆಬೆನ್ನೂರು

ಇಂದು ರಾಣೆಬೆನ್ನೂರಿನ ಹಕ್ಕಿಪಿಕ್ಕಿ ಜನಾಂಗದ ಕುಟುಂಬಗಳಿಗೆ ತೋಟಗಾರಿಕೆ ಸಚಿವ ಆರ್.ಶಂಕರ್ ಆಹಾರ ಕಿಟ್ ವಿತರಣೆ ಮಾಡಿದರು.

 R. Shankar decided to donate food kit to 50 thousand poor families in Ranebennur

author img

By

Published : May 17, 2021, 5:40 PM IST

Updated : May 17, 2021, 9:22 PM IST

ರಾಣೆಬೆನ್ನೂರು: ಕೊರೊನಾ ಹಿನ್ನೆಲೆ ಲಾಕ್​ಡೌನ್ ಮಾಡಿರುವ ಕಾರಣ ಕೆಲಸವಿಲ್ಲದೇ ಆರ್ಥಿಕ ಸಂಕಷ್ಟದಲ್ಲಿರುವ ರಾಣೆಬೆನ್ನೂರು ತಾಲೂಕಿನ 50 ಸಾವಿರ ಬಡ ಕುಟುಂಬಗಳಿಗೆ ಆಹಾರ ಕಿಟ್ ನೀಡಲಾಗುವುದು ಎಂದು ತೋಟಗಾರಿಕೆ ಸಚಿವ ಆರ್.ಶಂಕರ್ ತಿಳಿಸಿದರು.

ಇಂದು ರಾಣೆಬೆನ್ನೂರಿನ ಹಕ್ಕಿಪಿಕ್ಕಿ ಜನಾಂಗದ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಮಾಡಿ ಮಾತನಾಡಿದ ಅವರು, ತಾಲೂಕಿನ ಜನತೆಯ ಆಶೀರ್ವಾದದಿಂದ ನಾನು ಶಾಸಕನಾಗಿದ್ದೇನೆ ಹಾಗೆ ಮೂರು ಬಾರಿ ಸಚಿವರನ್ನಾಗಿ ಮಾಡಿದ್ದಾರೆ. ಇಂತಹ ತಾಲೂಕಿನ ಜನತೆ ಕೊರೊನಾ ಹೊಡೆತಕ್ಕೆ ಸಿಲುಕಿ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಬಡ ಕುಟುಂಬಕ್ಕೆ ಋಣ ತೀರಿಸುವ ಸಲುವಾಗಿ ಆಹಾರ ಕಿಟ್ ನೀಡಲು ತೀರ್ಮಾನಿಸಿದ್ದೇನೆ ಎಂದಿದ್ದಾರೆ.

ಬಡ ಕುಟುಂಬಗಳಿಗೆ ಆಹಾರ ಕಿಟ್ ನೀಡಲು ಮುಂದಾದ ಆರ್.ಶಂಕರ್

ಸದ್ಯ ತಾಲೂಕಿನಲ್ಲಿ ಕೊರೊನಾ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದಕ್ಕೆ ಕಾರಣ ನಮ್ಮ ಜನರು ಸಾಮಾಜಿಕ ಅಂತರವಿಲ್ಲದೇ ಇರುವುದು. ಆದ್ದರಿಂದ ತಾಲೂಕಿನ ಜನರು ಲಾಕ್​ಡೌನ್ ಸಮಯದಲ್ಲಿ ಯಾರು ಹೊರಗೆ ಬರಬಾರದು. ಅವಶ್ಯಕತೆ ಇದ್ದರೆ ಮಾತ್ರ ಹೊರಗಡೆ ಬರಬೇಕು ಎಂದು‌ ಮನವಿ ಮಾಡಿದರು.

Last Updated : May 17, 2021, 9:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.