ETV Bharat / state

ಹಾವೇರಿ ವಿಧಾನಸಭಾ ಕ್ಷೇತ್ರ: ಏಲಕ್ಕಿ ನಾಡಲ್ಲಿ ಮತದಾರರ ಲೆಕ್ಕಾಚಾರ ಹೇಗಿದೆ? - Rudrappa Lamani

ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಯ ಗವಿಸಿದ್ದಪ್ಪ ಮತ್ತು ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಆದ್ರೆ ಮತದಾರರು ಯಾರಿಗೆ ಮಣೆ ಹಾಕುತ್ತಾರೆ ಎನ್ನುವುದೇ ಕುತೂಹಲ ಮೂಡಿಸಿದೆ.

haveri assembly constituency
ಹಾವೇರಿ ವಿಧಾನಸಭಾ ಕ್ಷೇತ್ರ
author img

By

Published : Apr 22, 2023, 11:36 AM IST

ಹಾವೇರಿ: 2008ರ ವರೆಗೆ ಹಾವೇರಿ ವಿಧಾನಸಭಾ ಕ್ಷೇತ್ರ ಸಾಮಾನ್ಯ ಕ್ಷೇತ್ರವಾಗಿತ್ತು. 2008 ರಲ್ಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಯಿತು. ಈ ವೇಳೆ ಬಿಜೆಪಿಯ ನೆಹರು ಓಲೇಕಾರ್, 2013 ರಲ್ಲಿ ರುದ್ರಪ್ಪ ಲಮಾಣಿ, 2018 ರಲ್ಲಿ ಬಿಜೆಪಿಯ ನೆಹರು ಓಲೇಕಾರ್ ಕ್ಷೇತ್ರದ ಶಾಸಕರಾಗಿದ್ದಾರೆ. 2023 ರಲ್ಲಿ ಬಿಜೆಪಿ ಹಾಲಿ ಶಾಸಕ ನೆಹರು ಓಲೇಕಾರ್‌ಗೆ ಟಿಕೆಟ್ ನಿರಾಕರಸಿ ಗವಿಸಿದ್ದಪ್ಪ ದ್ಯಾಮಣ್ಣನವರಿಗೆ ಟಿಕೆಟ್ ನೀಡಲಾಗಿದೆ. ಈಗಾಗಲೇ ಒಂದು ಬಾರಿ ಕಾಂಗ್ರೆಸ್‌ನಿಂದ ಜಯಭೇರಿ ಭಾರಿಸಿರುವ ಮಾಜಿ ಸಚಿವ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ ಎರಡನೇ ಬಾರಿ ಕ್ಷೇತ್ರದಲ್ಲಿ ಜಯಗಳಿಸುವ ಉಮೇದಿನಲ್ಲಿದ್ದಾರೆ. ಇಷ್ಟು ದಿನ ಸರ್ಕಾರಿ ನೌಕರಿಯಲ್ಲಿದ್ದ ಬಿಜೆಪಿಯ ಗವಿಸಿದ್ದಪ್ಪ ದ್ಯಾಮಣ್ಣನವರ್ ಇದೇ ಪ್ರಥಮ ಬಾರಿಗೆ ಹಾವೇರಿ ಕ್ಷೇತ್ರದಲ್ಲಿ ಖಾತೆ ತೆರೆಯುವ ವಿಶ್ವಾಸದಲ್ಲಿದ್ದಾರೆ.

Nehru Olekar
ನೆಹರು ಓಲೇಕಾರ್

ಕ್ಷೇತ್ರದ ವಿಶ್ಲೇಷಣೆ : ಹಾವೇರಿ ವಿಧಾನಸಭಾ ಕ್ಷೇತ್ರ ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿದೆ. ಇಲ್ಲಿ ಹೊಸಮನಿ ಸಿದ್ದಪ್ಪ, ಗುದ್ಲೆಪ್ಪ ಹಳ್ಳಿಕೇರಿ, ಒಳಸಂಗದ ಸೇರಿದಂತೆ ಹಲವು ನಾಯಕರು ಸ್ವಾತಂತ್ರೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಖ್ಯಾತ ಹೋರಾಟಗಾರ ಮೈಲಾರ ಮಹದೇವಪ್ಪ ಪತ್ನಿ ಸಿದ್ದಮ್ಮನವರು ವರದಾ ನದಿ ದಂಡೆಯ ಮೇಲೆ ಗಾಂಧೀಜಿ ಸ್ಥಾಪಿಸಿದ್ದ ಸಬರಮತಿ ಆಶ್ರಮದಂತೆ ಮಹಿಳೆಯರಿಗೆ ಆಶ್ರಮ ಸ್ಥಾಪಿಸಲು ಮುಂದಾಗಿದ್ದರು. ಮಹಾತ್ಮ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಸೇರಿದಂತೆ ಹಲವು ಗಣ್ಯರು ಇಲ್ಲಿಗೆ ಭೇಟಿ ನೀಡಿದ್ದಾರೆ. ಸಾಹಿತಿ ಗಳಗನಾಥ, ದಕ್ಷಿಣ ಆಫ್ರಿಕಾದ ಸಂವಿಧಾನ ರಚಿಸಿದ ಎಲ್ ಜಿ ಹಾವನೂರು, ಸದ್ಬೋಧ ಚಂದ್ರಿಕೆ ಮಾಸಪತ್ರಿಕೆ ಮುದ್ರಣಗೊಳ್ಳುತ್ತಿದ್ದ ಅಗಡಿ ಆನಂದವನ ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿದೆ. ಏಲಕ್ಕಿ ಮಾಲೆಗೆ ಹೆಸರುವಾಸಿಯಾಗಿರುವ ಜಿಲ್ಲಾ ಕೇಂದ್ರ ಇರುವುದು ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿಯೆ. ಇಲ್ಲಿ ಹತ್ತಿ, ಮೆಣಸಿನಕಾಯಿ, ಮೆಕ್ಕೆಜೋಳವನ್ನ ಪ್ರಮುಖವಾಗಿ ಬೆಳೆಯಲಾಗುತ್ತಿದೆ.

2018 ರಲ್ಲಿ ಹಾವೇರಿಯ ಎಸ್​​​ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ನೆಹರು ಓಲೇಕಾರ್ 86,565 ಮತ ಪಡೆದು ಜಯಶಾಲಿಯಾಗಿದ್ದರು. 11,304 ಮತಗಳ ಅಂತರದಿಂದ ನೆಹರು ಓಲೇಕಾರ್ ಗೆಲುವು ಸಾಧಿಸಿದ್ದರು. ಇವರು ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ 75,261 ಮತಗಳನ್ನ ಪಡೆದು ಸೋಲುಂಡಿದ್ದರು. ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ 2018 ರಲ್ಲಿ ಪ್ರತಿಶತ 76.92 ರಷ್ಟು ಮತದಾನವಾಗಿತ್ತು.

Rudrappa Lamani
ರುದ್ರಪ್ಪ ಲಮಾಣಿ

ಆದ್ರೆ, 2023 ರ ಹಾವೇರಿ ವಿಧಾನಸಭಾ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಬಿಜೆಪಿಯಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದ ಹಾಲಿ ಶಾಸಕ ನೆಹರು ಓಲೇಕಾರ್‌ಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿಲ್ಲ. ಬದಲಿಗೆ ಸರ್ಕಾರಿ ನೌಕರಿಯಲ್ಲಿದ್ದು ರಾಜೀನಾಮೆ ನೀಡಿರುವ ಗವಿಸಿದ್ದಪ್ಪ ದ್ಯಾಮಣ್ಣನವರಿಗೆ ಟಿಕೆಟ್ ನೀಡಿದೆ. ಇನ್ನು ಕಾಂಗ್ರೆಸ್, ಕಳೆದ ಬಾರಿ ನೆಹರು ಓಲೇಕಾರ್ ವಿರುದ್ಧ ಸ್ಪರ್ಧಿಸಿ ಸೋಲುಂಡಿದ್ದ ರುದ್ರಪ್ಪ ಲಮಾಣಿಗೆ ಟಿಕೆಟ್ ನೀಡಿದೆ. ಹಾವೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗವಿಸಿದ್ದಪ್ಪ ಮತ್ತು ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಜೆಡಿಎಸ್, ಎಎಪಿ ಬಿಎಸ್​ಪಿ ಸೇರಿದಂತೆ ವಿವಿಧ ಅಭ್ಯರ್ಥಿಗಳ ನಾಮಪತ್ರದ ಬಗ್ಗೆ ಇಂದು ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

Gavisiddappa
ಗವಿಸಿದ್ದಪ್ಪ
haveri assembly constituency
ಹಾವೇರಿ ವಿಧಾನಸಭಾ ಕ್ಷೇತ್ರದ ನೋಟ

ಕ್ಷೇತ್ರದ ಮತದಾರರ ಸಂಖ್ಯೆ : ಕ್ಷೇತ್ರದಲ್ಲಿ ಪುರುಷರು - 1,17,611, ಮಹಿಳೆಯರು - 1,11,253 ಮತ್ತು ಒಟ್ಟು- 2,28,864 ಮಂದಿ ಮತದಾರರಿದ್ದಾರೆ. ಜೊತೆಗೆ ಇಲ್ಲಿ ಲಿಂಗಾಯತ ಮತಗಳು ನಿರ್ಣಾಯಕರಾಗಿದ್ದು, ಇವರೊಂದಿಗೆ ದಲಿತರು, ಮುಸ್ಲಿಮರು, ಕುರುಬ, ವಿಶ್ವಕರ್ಮ ಕೂಡ ಪ್ರಬಲ ಸಮುದಾಯವಾಗಿದೆ.

ಹಾವೇರಿ ವಿಧಾನಸಭಾ ಕ್ಷೇತ್ರದ ಕಳೆದ ಮೂರು ಚುನಾವಣಿಗಳ ವಿವರ ಈ ರೀತಿ ಇದೆ :

  • 2008 ರಲ್ಲಿ ಬಿಜೆಪಿಯ ನೆಹರು ಓಲೇಕಾರ್ ಜಯಭೇರಿ ಬಾರಿಸಿದ್ದರು.
  • 2013 ರಲ್ಲಿ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ ಜಯಭೇರಿ ಬಾರಿಸಿದ್ದರು.
  • 2018 ರಲ್ಲಿ ಬಿಜೆಪಿಯ ನೆಹರು ಓಲೇಕಾರ್ ಮತ್ತೆ ಜಯಗಳಿಸಿದ್ದರು.
  • 2008 ರಲ್ಲಿ ಬಿಜೆಪಿಯ ನೆಹರು ಓಲೇಕಾರ್ 63,780 ಮತಗಳಿಂದ ಜಯಭೇರಿ ಬಾರಿಸಿದ್ದರು.
  • 2013 ರಲ್ಲಿ ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ 83,119 ಮತಗಳಿಂದ ಜಯಗಳಿಸಿದ್ದರು.
  • 2018 ರಲ್ಲಿ ಬಿಜೆಪಿ ನೆಹರು ಓಲೇಕಾರ್ 86,565 ಮತಗಳನ್ನ ಪಡೆದು ಜಯಗಳಿದ್ದರು.
  • 2023 ರಲ್ಲಿ ಬಿಜೆಪಿ ಗವಿಸಿದ್ದಪ್ಪ ಮತ್ತು ಕಾಂಗ್ರೆಸ್‌ನ ರುದ್ರಪ್ಪ ಲಮಾಣಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.