ETV Bharat / state

ಉಪಸಮರ ಗೆದ್ದ ಕಾಂಗ್ರೆಸ್ ಮಹಾಸಮರ ಗೆಲ್ಲುವುದೇ? : ಹಾನಗಲ್‌ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ

ಹಾವೇರಿ ಜಿಲ್ಲೆಯ ಮತ್ತೊಂದು ಪ್ರಮುಖ ವಿಧಾನಸಭಾ ಕ್ಷೇತ್ರವಾದ ಹಾನಗಲ್ ಕ್ಷೇತ್ರದ ಮಾಹಿತಿ ಇಲ್ಲಿದೆ ನೋಡಿ.

ಹಾನಗಲ್ ವಿಧಾನಸಭಾ ಕ್ಷೇತ್ರ
ಹಾನಗಲ್ ವಿಧಾನಸಭಾ ಕ್ಷೇತ್ರ
author img

By

Published : Apr 27, 2023, 3:00 PM IST

ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಐದು ದಶಕಗಳಿಂದ ಎದುರಾಳಿಯಾಗಿದ್ದು ಕಾಂಗ್ರೆಸ್‌ನ ಮನೋಹರ್ ತಹಶೀಲ್ದಾರ್ ಮತ್ತು ಮಾಜಿ ಸಚಿವ ದಿವಂಗತ ಸಿ ಎಂ ಉದಾಸಿ. 1983 ರಿಂದ ಆರಂಭವಾದ ಅವರ ಜುಗಲ್​ಬಂದಿ ಕಳೆದ 2013 ರವರಗೆ ನಡೆದಿತ್ತು. ಮನೋಹರ್ ತಹಶೀಲ್ದಾರ್ 1978 ರಲ್ಲಿ ಸ್ಪರ್ಧೆಗೆ ಇಳಿದರೆ, 1983 ರಲ್ಲಿ ಸಿ ಎಂ. ಉದಾಸಿ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.

ಮನೋಹರ್​ ತಹಶೀಲ್ದಾರ್
ಮನೋಹರ್​ ತಹಶೀಲ್ದಾರ್

2018 ರಲ್ಲಿ ಕಾಂಗ್ರೆಸ್​ ಮನೋಹರ್ ತಹಶೀಲ್ದಾರ್ ಅವರನ್ನು ಬಿಟ್ಟು ಶ್ರೀನಿವಾಸ್​ ಮಾನೆಯನ್ನ ಕಣಕ್ಕಿಳಿಸಿತು. ಮೊದಲ ಬಾರಿ ಸೋತ ಮಾನೆ ನಂತರ ಉಪಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಸದ್ಯ ಹಾನಗಲ್ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. ಕಾಂಗ್ರೆಸ್‌ಸಲ್ಲಿ ಟಿಕೆಟ್ ಸಿಗದ ಕಾರಣ ಮನೋಹರ್​ ತಹಶೀಲ್ದಾರ್ ಈಗ ಜೆಡಿಎಸ್ ಸೇರಿದ್ದಾರೆ. ಬಿಜೆಪಿಯಿಂದ ಶಿವರಾಜ್ ಸಜ್ಜನರ್ ಕಣಕ್ಕಿಳಿದಿದ್ದಾರೆ. ಇತ್ತ ಕಾಂಗ್ರೆಸ್ಸಿನಿಂದ ಹಾಲಿ ಶಾಸಕ ಶ್ರೀನಿವಾಸ ಮಾನೆ ಕಣದಲ್ಲಿದ್ದು, ಬಹುತೇಕ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

Srinivas Mane
ಶ್ರೀನಿವಾಸ್​ ಮಾನೆ

ಕ್ಷೇತ್ರದ ವಿಶೇಷತೆ: ಹಾವೇರಿ ಜಿಲ್ಲೆಯ ಹಾನಗಲ್ ಮಲೆನಾಡು ಸೆರಗಿನಲ್ಲಿರುವ ವಿಧಾನಸಭಾ ಕ್ಷೇತ್ರ. ವಿರಾಟಪುರ ಎಂದು ಕರೆಯುವ ಹಾನಗಲ್, ಪಾಂಡವರ ಕಾಲದಲ್ಲಿ ಉತ್ತರಕುಮಾರನ ರಾಜ್ಯವಾಗಿತ್ತು ಎನ್ನುವ ದಂತಕತೆಗಳಿವೆ. ತಾರಕೇಶ್ವರನ ಬೀಡು ಎಂದು ಕರೆಸಿಕೊಳ್ಳುವ ಹಾನಗಲ್ ವೀರಶೈವ ಮಹಾಸಭಾ ಸ್ಥಾಪಿಸಿದ್ದ ಕುಮಾರೇಶ್ವರರ ನೆಲೆಬೀಡು. ಪಂಡಿತ ಪಂಚಾಕ್ಷರಿ ಗವಾಯಿ ಹಾಗೂ ಪಂಡಿತ ಪುಟ್ಟರಾಜ ಗವಾಯಿ ಜನಿಸಿದ ಕ್ಷೇತ್ರ. ಜೊತೆಗೆ, ಇಲ್ಲಿ ಕುಮಾರೇಶ್ವರ ಸ್ಥಾಪಿಸಿದ ಶಿವಯೋಗ ಮಂದಿರ ಇಂದಿಗೂ ಇದೆ. ಒಂದು ಕಾಲದಲ್ಲಿ ಕದಂಬರ ರಾಜ್ಯದ ಶಾಖೆಯಾಗಿದ್ದ ಹಾನಗಲ್​ನಲ್ಲಿ ತಾರಕೇಶ್ವರ ದೇವಸ್ಥಾನ ಪ್ರಸಿದ್ಧವಾಗಿದೆ.

ಇಲ್ಲಿಯ ಗೌಳಿಗರ ಎಮ್ಮೆ ಕಾದಾಟ ಮತ್ತು ರೈತರ ದನ ಬೆದರಿಸುವ ಸ್ಪರ್ಧೆಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಭತ್ತದ ಕಣಜವಾಗಿದ್ದ ಹಾನಗಲ್‌ನಲ್ಲಿ ಈಗ ಅಡಿಕೆ, ಶುಂಠಿ, ಕಬ್ಬು ಮತ್ತು ಗೋವಿನಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ.

ಶಿವರಾಜ್ ಸಜ್ಜನರ್
ಶಿವರಾಜ್ ಸಜ್ಜನರ್

2018 ರಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಸಿ ಎಂ ಉದಾಸಿ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಆದರೆ, ತೀವ್ರ ಅನಾರೋಗ್ಯದ ಕಾರಣ 2021 ರಲ್ಲಿ ಅವರು ನಿಧನರಾದರು. ನಂತರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ಸಿನ ಶ್ರೀನಿವಾಸ್​ ಮಾನೆ ಜಯಭೇರಿ ಆಗಿದ್ದರು. ಶಿವರಾಜ್​ ಸಜ್ಜನರ್ 80,117 ಮತ ಪಡೆದರೆ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ 87,490 ಮತಗಳನ್ನ ಪಡೆದು ವಿಜಯಮಾಲೆ ಧಿರಿಸಿದ್ದರು. ಶಿವರಾಜ್ ಸಜ್ಜನರ್​ಗೆ 7,373 ಮತಗಳಿಂದ ಸೋಲಿನ ರುಚಿ ತೋರಿಸಿದರು.

ಹಾನಗಲ್ ವಿಧಾನಸಭಾ ಕ್ಷೇತ್ರ :

  • ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ : 2,07,411
  • ಪುರುಷ ಮತದಾರರು - 1,07,054
  • ಮಹಿಳಾ ಮತದಾರರು - 1,00,357 ಇದ್ದಾರೆ.

ಹಾಗೆಯೇ, ಇಲ್ಲಿ ಲಿಂಗಾಯತ ಮತಗಳು ನಿರ್ಣಾಯಕವಾಗಿದ್ದು, ಇವರೊಂದಿಗೆ ಮುಸ್ಲಿಂ, ಕುರುಬ, ಗಂಗಾಮತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕೂಡ ಪ್ರಬಲರಾಗಿದ್ದಾರೆ.

ಕಳೆದ ಮೂರು ಚುನಾವಣೆಗಳಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರದ ವಿವರ ಈ ರೀತಿ ಇದೆ:

  • 2013 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮನೋಹರ ತಹಶೀಲ್ದಾರ್ ಕೆಜೆಪಿಯಲ್ಲಿದ್ದ ಸಿ.ಎಂ. ಉದಾಸಿ ಅವರನ್ನು ಸೋಲಿಸಿದ್ದರು.
  • 2018 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಿ.ಎಂ. ಉದಾಸಿ ಕಾಂಗ್ರೆಸ್‌ನ ಶ್ರೀನಿವಾಸ ಮಾನೆಗೆ ಸೋಲಿನ ರುಚಿ ತೋರಿಸಿದ್ದರು.
  • 2021 ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಅವರು ಬಿಜೆಪಿಯ ಶಿವರಾಜ್ ಸಜ್ಜನರ್​ ಅವರನ್ನು ಸೋಲಿಸಿದ್ದರು.
  • 2021 ರ ಉಪಚುನಾವಣೆಯಲ್ಲಿ ಕಾಂಗ್ರೆಸ್ಸನ ಶ್ರೀನಿವಾಸ್ ಮಾನೆ ಬಿಜೆಪಿಯ ಶಿವರಾಜ್ ಸಜ್ಜನರ್ 7373 ಮತಗಳಿಂದ ಸೋಲುಣಿಸಿದ್ದರು
  • 2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಬಿಜೆಪಿಯ ಶಿವರಾಜ್ ಸಜ್ಜನರ್ ಮತ್ತು ಜೆಡಿಎಸ್‌ನ ಮನೋಹರ ತಹಶೀಲ್ದಾರ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

ಇದನ್ನೂ ಓದಿ : ಬ್ಯಾಡಗಿ ಕ್ಷೇತ್ರ ನೋಟ: ಈ ಬಾರಿ ಕಾಂಗ್ರೆಸ್​ - ಬಿಜೆಪಿ ನಡುವೆ ಹೆಚ್ಚಿದ ಚುನಾವಣಾ ಘಾಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.