ಹಾವೇರಿ: ಲಾಕ್ಡೌನ್ನಿಂದ ಮದ್ಯದಂಗಡಿ ಬಂದ್ ಮಾಡಿರುವ ಪರಿಣಾಮ ಮದ್ಯವ್ಯಸನಿಗಳು ವಿಚಿತ್ರವಾಗಿ ವರ್ತಿಸುತ್ತಿದ್ದರೆ, ಜನಸಾಮಾನ್ಯರಲ್ಲಿ ಭಯ ಆವರಿಸಿದೆ.
ಮದ್ಯದಂಗಡಿಗಳು ಬಂದ್ ಆಗಿರುವುದರಿಂದ ಖಿನ್ನತೆಗೆ ಒಳಗಾದಂತೆ ವರ್ತಿಸುವ ಕುಡುಕರು ಮನೆಯ ಸದಸ್ಯರಿಗೆ ಬಡಾವಣಿಯಲ್ಲಿರುವ ಜನರಿಗೆ ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಈ ಕುರಿತಂತೆ ಮನೆಯ ಸದಸ್ಯರು ಭಯಪಡುವ ಅವಶ್ಯಕತೆ ಇಲ್ಲಾ ಎನ್ನುತ್ತಿದ್ದಾರೆ ಮನೋವೈದ್ಯರು.
ಒಂದು ಚಟಕ್ಕೆ ದಾಸರಾಗಿ ನಂತರ ಅದನ್ನ ನಿಲ್ಲಿಸಿದಾಗ ದೇಹದಲ್ಲಿ ಹಲವು ಬದಲಾವಣೆಯಾಗುತ್ತವೆ. ಈ ರೀತಿಯಿಂದ ಚಟಕ್ಕೆ ಅಂಟಿಕೊಂಡವರು ವಿಚಿತ್ರವಾಗಿ ವರ್ತಿಸಲಾರಂಭಿಸುತ್ತಾರೆ. ಆ ಸಮಯದಲ್ಲಿ ಮನೆಯ ಸದಸ್ಯರು ಮದ್ಯವ್ಯಸನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.