ಹಾವೇರಿ: ಖಾಸಗಿ ಆಸ್ಪತ್ರೆ ವೈದ್ಯರೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಬಸವೇಶ್ವರ ನಗರದಲ್ಲಿ ನಡೆದಿದೆ.
ಜಗದೀಶ ಗೊಡ್ಡೆಮ್ಮಿ (47 ವರ್ಷ) ಮೃತ ವೈದ್ಯ. ಇವರು ಕಿವಿ, ಮೂಗು, ಗಂಟಲು ತಜ್ಞನಾಗಿರಾಗಿದ್ದರು. ಇವರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಇನ್ನು ಈ ಕುರಿತಂತೆ ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.