ರಾಣೆಬೆನ್ನೂರು (ಹಾವೇರಿ): ನಾಳೆ ನಡೆಯಲಿರುವ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಗೆ ರಾಣೆಬೆನ್ನೂರು ತಾಲೂಕು ಆಡಳಿತ ಸಕಲ ಸಿದ್ಧತೆ ಮಾಡಿಕೊಡಿದೆ.
ಸುಮಾರು 8,000 ಪದವೀಧರ ಮತದಾರರನ್ನು ರಾಣೆಬೆನ್ನೂರು ಕ್ಷೇತ್ರ ಒಳಗೊಂಡಿದೆ, ತಾಲೂಕಿನಲ್ಲಿ ಒಟ್ಟು 10 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ನಗರದಲ್ಲಿ 6, ಹಲಗೇರಿ ಗ್ರಾಮದಲ್ಲಿ 2, ಮೇಡ್ಲೇರಿ ಗ್ರಾಮದಲ್ಲಿ 1 ಮತ್ತು ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿ 1 ಮತದಾನ ಕೇಂದ್ರ ಸ್ಥಾಪಿಸಲಾಗಿದೆ.
ಕೊರೊನಾ ಮಾರ್ಗಸೂಚಿಯಂತೆ ಮತದಾನ ಕೇಂದ್ರ ತೆರೆಯಲಾಗಿದ್ದು, ಈಗಾಗಲೇ ಸ್ಯಾನಿಟೈಸ್ ಮಾಡಿಸಲಾಗಿದೆ. ಮತದಾರರು ಕನಿಷ್ಠ 6 ಅಡಿ ಅಂತರ ಕಾಪಾಡಿಕೊಳ್ಳಲು ಮಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಥರ್ಮಲ್ ಗನ್, ಮಾಸ್ಕ್ ಮತ್ತು ಗ್ಲೌಸ್ ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಮತದಾರರ ಮನವೊಲಿಸಲು ಉಭಯ ಅಭ್ಯರ್ಥಿಗಳು ಮುಂದಾಗಿದ್ದಾರೆ. ಸದ್ಯ ರಾಣೆಬೆನ್ನೂರು ತಾಲೂಕಿನಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.