ರಾಣೆಬೆನ್ನೂರ: ತಾಲೂಕಿನ ಆರೇಮಲ್ಲಾಪುರ ಗ್ರಾಮದ ಶರಣಬಸವೇಶ್ವರ ಮಠದ ಪ್ರಣವಾನಂದ ಸ್ವಾಮೀಜಿಗೆ ಕೊಲೆ ಮಾಡುವುದಾಗಿ ಪತ್ರ ಬರೆದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಶರಣಬಸವೇಶ್ವರ ಮಠಕ್ಕೆ ಇಂದು ಒಂದು ಅನಾಮಧೇಯ ಪತ್ರ ಬಂದಿದೆ. ಅದರಲ್ಲಿ 'ನೀ ಪಂಚಾಯತ್ ಸದಸ್ಯ ಆಗೀನಿ ಅಂತ ಮೆರೆಯಬೇಡ. ನಾವು ಯಾಕೆ ಸುಮ್ಮನಿದ್ದೇವಿ ಗೊತ್ತಾ.. ನಿಮ್ಮನ್ನು ಯಾವಾಗ್ಲೋ ಊರು ಬಿಟ್ಟು ಕಳಿಸ್ತಿದ್ದಿವಿ, ನೀವು ಆ ಒಬ್ಬ ವ್ಯಕ್ತಿಯಿಂದ ಬಚಾವ್ ಆಗ್ತಿದ್ದಿರಿ. ನಮಗೆ ಕೊಲೆ ಮಾಡುವುದು ದೊಡ್ಡ ಕೆಲಸ ಅಲ್ಲ. ಟಿಪ್ಪರ್, ಲಾರಿ ತಂದು ಡಿಕ್ಕಿ ಹೊಡೆಸಿದ್ರೆ ಸಾಕು, ನೀವು ಇಲ್ಲದಂತೆ ಮಾಡಬಹುದು' ಎಂದು ಪತ್ರದೊಳಗೆ ಬರೆಯಲಾಗಿದೆ.
ಪತ್ರ ಬಂದ ಹಿನ್ನೆಲೆ ಪ್ರಣಾವಾನಂದ ಸ್ವಾಮೀಜಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದು, ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.