ETV Bharat / state

ಗುಡಿಯ ಕಟ್ಟಿ ಬಡವನೆದೆಗೆ ತಂಪನೆರೆವ ಸ್ವಾಮೀಜಿ

50 ವರ್ಷದಿಂದ ಗುಡಿಸಲಲ್ಲಿ ಬೆಳಕಿಲ್ಲದೆ, ಮಲಗಲು ಸರಿಯಾದ ಜಾಗವಿಲ್ಲದೇ ಪರದಾಡುತ್ತಿದ್ದ ವೃದ್ಧ ದಂಪತಿಯ ನೆರವಿಗೆ ಶರಣಬಸವೇಶ್ವರ ಮಠದ ಪ್ರಣಾವಾನಂದ ಸ್ವಾಮೀಜಿ ಬಂದಿದ್ದಾರೆ.

Pranavanand swamiji constructing home
ಬಾಳಲ್ಲಿ ಬೆಳಕಾದ ಸ್ವಾಮೀಜಿ
author img

By

Published : Apr 3, 2020, 5:02 PM IST

ರಾಣೆಬೆನ್ನೂರು (ಹಾವೇರಿ) : ಕಳೆದ ಐದು ದಶಕದಿಂದ ಗುಡಿಸಲಲ್ಲಿ ಜೀವನ ಸಾಗಿಸುತ್ತಿದ್ದ ವೃದ್ಧ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿಕೊಡಲು ಸ್ವಾಮೀಜಿ ಮುಂದಾಗಿದ್ದಾರೆ.

ತಾಲೂಕಿನ ಆರೇಮಲ್ಲಾಪುರ ಗ್ರಾಮದ ಶರಣಬಸವೇಶ್ವರ ಮಠದ ಪ್ರಣಾವಾನಂದ ಸ್ವಾಮೀಜಿ ಗ್ರಾಮದ ಬಡರೋಗಿಗೆ ಮನೆ ನಿರ್ಮಿಸಿ ಕೊಡಲು ಡಿಸಿ, ತಹಶಿಲ್ದಾರ್, ಎಸಿ ಅವರಿಗೆ ವಿಡಿಯೋ ಮೂಲಕ ‌ಮನವಿ ಮಾಡಿಕೊಂಡಿದ್ದಾರೆ. ಗ್ರಾಮದ ಗುಡ್ಡಪ್ಪ ಬೇವಿನಮರದ ಹಾಗೂ ರೇಣುಕಾ ದಂಪತಿಗಳು ಹಲವು ವರ್ಷಗಳಿಂದ ಮನೆಯಿಲ್ಲದೆ ಪರದಾಡುತ್ತಿದ್ದಾರೆ.

ಗ್ರಾಮದ ಜಾಗವೊಂದರಲ್ಲಿ ಸಣ್ಣ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇಲ್ಲಿಯವರೆಗೂ ಸಹ ಗ್ರಾಮ ಪಂಚಾಯತಿ ಅಧಿಕಾರಿಗಳಾಗಲಿ ಮತ್ತು ಸದಸ್ಯರಾಗಲಿ ಈ ಕುಟುಂಬದ ಬಗ್ಗೆ ಕಾಳಜಿ ವಹಿಸಿಲ್ಲ.

ಗುಡ್ಡಪ್ಪ ಊರೂರು ಅಲೆದ ಬಂದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಇದರಿಂದ ಇವರಿಗೆ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ಪ್ರಣಾವಾನಂದ ಸ್ವಾಮೀಜಿ ಮನೆ ನಿರ್ಮಿಸಲು ‌ಮುಂದಾಗಿದ್ದು, ಇದಕ್ಕೆ ಸರ್ಕಾರದ ಅಧಿಕಾರಿಗಳು ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.