ಹಾವೇರಿ: ಕೊರೊನಾ ಚಿಕಿತ್ಸೆ ವೇಳೆ ವೈದ್ಯರು ಹಾಗೂ ಸೋಂಕಿತರು ಕಡ್ಡಾಯವಾಗಿ ಪಿಪಿಇ ಕಿಟ್ ಧರಿಸಲೇಬೇಕು. ಜೊತೆಗೆ ಸುರಕ್ಷತಾ ದೃಷ್ಟಿಯಿಂದ ಅದು ಅತ್ಯಗತ್ಯ ಕೂಡ. ಈ ಪಿಪಿಇ ಕಿಟ್ ಬಳಕೆಯಷ್ಟೇ, ವಿಲೇವಾರಿಯೂ ಕೂಡ ಅತ್ಯಗತ್ಯ. ಈ ಕುರಿತ ವರದಿ ಇಲ್ಲಿದೆ.
ಆಸ್ಪತ್ರೆಯಲ್ಲಿ ರೋಗಿಗಳು ಅವರಿಗೆ ಚಿಕಿತ್ಸೆ ನೀಡುವ ವೈದ್ಯರ ಸಂಖ್ಯೆಯ ಮೇಲೆ ಪಿಪಿಇ ಕಿಟ್ ಬಳಸಲಾಗುತ್ತೆ. ಈ ಕಿಟ್‌ಗಳನ್ನ 6ರಿಂದ 8 ಗಂಟೆಯವರೆಗೆ ಮಾತ್ರ ಬಳಸಲು ಅವಕಾಶವಿದೆ. ಪಿಪಿಇ ಕಿಟ್ ಜೊತೆಗೆ ಅದನ್ನ ನಾಶಪಡಿಸುವ ಬ್ಯಾಗ್ ಸಹ ಅದರಲ್ಲಿಯೇ ಇರುತ್ತೆ. ಉಪ ವಿಭಾಗಗಳಿರುವ ಈ ಕಿಟ್‌ನ್ನ ಧರಿಸಲು ಕೆಲವು ವಿಧಾನಗಳಿವೆ. ಒಂದು ವೇಳೆ ಪಿಪಿಇ ಕಿಟ್ ಧರಿಸುವಲ್ಲಿ ತಪ್ಪಾದರೆ, ಕೊರೊನಾ ಸೋಂಕು ವೈದ್ಯರಿಗೂ ತಗಲುವ ಸಾಧ್ಯತೆ ಅಧಿಕವಾಗಿರುತ್ತೆ.
ಆಸ್ಪತ್ರೆಯಲ್ಲಿ ರೋಗಿಗಳನ್ನ ತಪಾಸಣೆ ನಡೆಸಲು ಹೋಗುವವರ, ತಪಾಸಣೆ ನಡೆಸಿ ಬರುವವರ ಮಾರ್ಗ ಸಹ ಬದಲಾಗಿರುತ್ತೆ. ಅಲ್ಲದೆ, ಕೋವಿಡ್ ರೋಗಿಗಳಿರುವ ವಾರ್ಡ್‌ಗಳಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಬಳಸುವಂತಿಲ್ಲ. ಪಿಪಿಇ ಕಿಟ್ ಬಳಕೆ ನಂತರ ಅದನ್ನ ಪ್ರತ್ಯೇಕವಾಗಿ ನಾಶಪಡಿಸಿ, ಬಳಿಕ ಪ್ರತ್ಯೇಕವಾಗಿ ವಿಲೇವಾರಿ ಮಾಡಲಾಗುತ್ತೆ. ಇನ್ನು, ಪಿಪಿಇ ಕಿಟ್ ಧರಿಸುವ ವೈದ್ಯರು ಹಾಗೂ ಸಿಬ್ಬಂದಿ ಆಭರಣಗಳು, ಬೆಲ್ಟ್, ವಾಚ್ ಧರಿಸುವಂತಿಲ್ಲ.