ಹಾವೇರಿ: ಮನೆ ಹಾಗೂ ಅಂಗಡಿಗಳ ಕಳ್ಳತನ ಮಾಡುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಜಿಲ್ಲೆಯ ಶಿಗ್ಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚಂದಪ್ಪ ಇಂಚಲ್ (45) ಬಂಧಿತ ಆರೋಪಿ. ಈತ ಮೂಲತಃ ಬೈಲಹೊಂಗಲ ತಾಲೂಕಿನ ಮಲ್ಲಾಪುರ ಗ್ರಾಮದವನಾಗಿದ್ದು, ಶಿಗ್ಗಾವಿ ಪಟ್ಟಣದ ಜನತಾ ಬಜಾರ್‌ನಲ್ಲಿ ಕಳ್ಳತನ ಮಾಡಿದ್ದ ಎನ್ನಲಾಗುತ್ತಿದೆ. ಈ ಕುರಿತಂತೆ ಜನತಾ ಬಜಾರ್‌ನ ಅಂಗಡಿ ಮಾಲೀಕ ಮಲ್ಲೇಶಪ್ಪ ಶಿರಬಡಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.