ಹಾವೇರಿ: ಜಿಲ್ಲೆಯ ಪ್ರಮುಖ ವಾಣಿಜ್ಯನಗರಿ ರಾಣೆಬೆನ್ನೂರು. ಇಲ್ಲಿ ಹಾದು ಹೋಗಿರುವ ಬಾಗಲಕೋಟೆ ಮತ್ತು ಬಿಳಿಗಿರಿ ರಂಗನಬೆಟ್ಟದ ರಾಜ್ಯ ಹೆದ್ದಾರಿಯಲ್ಲಿ ರೈಲು ಇಲಾಖೆ ಕೆಳಸೇತುವೆ ನಿರ್ಮಿಸಿದೆ. ಆದರೆ, ಈ ಕಾಮಗಾರಿ ಅವೈಜ್ಞಾನಿಕ ಎಂದು ಆರೋಪಿಸಿ ರೈತರು ಹಲವು ಬಾರಿ ಮನವಿ ಸಲ್ಲಿಸಿದ್ದರು. ಆದರೆ ರೈಲು ಇಲಾಖೆಯಾಗಲೀ, ಪಿಡಬ್ಲೂಡಿ ಇಲಾಖೆಯಾಗಲಿ ಯಾವುದೇ ರೀತಿ ತೆಲೆಕೆಡಿಸಿಕೊಳ್ಳದೆ ಸೇತುವೆ ನಿರ್ಮಿಸಿಬಿಟ್ಟಿವೆ.
ಪರಿಣಾಮ ಇಲ್ಲಿ ಮಳೆಯಾದ್ರೆ ಸಾಕು ಕೆಳಸೇತುವೆ ಮೇಲೆ ನೂರುಮೀಟರ್ ಉದ್ದ ಮಳೆನೀರು ನಿಂತು ಜನರಿಗೆ ಸಂಚರಿಸಲು ತೊಂದರೆಯಾಗ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದ್ರೂ ಯಾವುದೇ ಪ್ರಯೋಜನ ಕಾಣದ ಹಿನ್ನೆಲೆಯಲ್ಲಿ ಸ್ಥಳೀಯರು ಇಂದು ಇದನ್ನೇ ಈಜುಗೊಳದಂತೆ ಬಳಸಿ ಈಜಾಟವಾಡಿದ್ದಾರೆ. ಅಷ್ಟೇ ಅಲ್ಲದೇ, ಇಲಾಖೆಗಳಿಗೆ ನಾಚಿಕೆಯಾಗಲಿ ಎಂದು ಸೇತುವೆಯಲ್ಲಿ ನಿಂತ ನೀರಿಗೆ ಬಾಗಿನ ಅರ್ಪಿಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.