ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರದ ದುರ್ಗಾದೇವಿ ಕಾಲೊನಿಯ ಬೀದಿಗಳಿಗೆ ಸೂಕ್ತವಾದ ರಸ್ತೆ ಇಲ್ಲದ ಕಾರಣ ಮಳೆಗಾಲ ಆರಂಭವಾದರೆ ಸಾಕು ಇಲ್ಲಿಯ ಜನ ಕೆಸರಿನಲ್ಲಿ ಓಡಾಡುವ ಅನಿವಾರ್ಯತೆ ಎದುರಾಗುತ್ತದೆ.
ಹೌದು, 80 ಕ್ಕೂ ಅಧಿಕ ಮನೆಗಳಿರುವ ಈ ಕಾಲೊನಿಗೆ ಸೂಕ್ತ ರಸ್ತೆ ಸೌಲಭ್ಯವಿಲ್ಲದ ಹಿನ್ನೆಲೆ ಮಳೆಗಾಲ ಆರಂಭವಾದರೇ ಸಾಕು ಜನ ಹೊರಗೆ ಕಾಲಿಡಲೂ ಪರದಾಡುವಂತಾಗಿದೆ. ಇನ್ನೂ ವಾಹನಗಳ ಚಲಾವಣೆಯಂತೂ ಸಾಧ್ಯವೇ ಇಲ್ಲದ ಮಾತು.
ಇನ್ನೂ ಎಲ್ಲೆಡೆ ಕೆಸರುಮಯ ವಾತಾವರಣದಿಂದಾಗಿ ಸಾಕಷ್ಟು ಚರ್ಮ ಕಾಯಿಲೆಗಳು ನಮ್ಮನ್ನು ಕಾಡುತ್ತಿವೆ. ಈ ಕುರಿತಂತೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.