ETV Bharat / state

ಆಸ್ತಿಗಾಗಿ ವೃದ್ಧೆಯ ಹಿಡಿದು ಎಳೆದಾಡಿದ್ರು! ಹಾವೇರಿಯಲ್ಲಿ ಅಮಾನವೀಯ ಘಟನೆ: ವಿಡಿಯೋ - old woman dragged in haveri

ವೃದ್ಧೆಯ ಹೆಸರಿನಲ್ಲಿರುವ ಆಸ್ತಿಯನ್ನು ಪಡೆಯಲು ಸ್ವಸಮಾಜದವರೇ ಆಕೆಯನ್ನು ಅಮಾನವೀಯವಾಗಿ ಎಳೆದಾಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

People who grabbed the old woman dragged
ಆಸ್ತಿಗಾಗಿ ವೃದ್ಧೆ ಹಿಡಿದು ಎಳೆದಾಡಿದ ಸ್ವಸಮಾಜದವರು
author img

By

Published : Oct 19, 2022, 6:29 PM IST

Updated : Oct 19, 2022, 6:37 PM IST

ಹಾವೇರಿ: ಆಸ್ತಿ ಆಸೆಗೆ ಅಜ್ಜಿಯನ್ನು ಹಿಡಿದು ಮನಬಂದಂತೆ ಅಮಾನವೀಯವಾಗಿ ಎಳೆದಾಡಿರುವ ಘಟನೆ ಹಾವೇರಿಯ ಶಿಗ್ಗಾಂವಿ ತಾಲೂಕಿನ ಮುಗಳೀಕಟ್ಟಿ ಗ್ರಾಮದಲ್ಲಿ ನಡೆಯಿತು. 90 ವರ್ಷದ ಕರೆವ್ವಾ ಮಾದರ ಎಂಬಾಕೆಯನ್ನು ಸ್ವಸಮಾಜದವರೇ ಎಳೆದಾಡಿದರು. ಘಟನೆಯ ವಿಡಿಯೋ ವೈರಲ್ ಆಗಿದೆ.

ಆಸ್ತಿಗಾಗಿ ವೃದ್ಧೆಯ ಹಿಡಿದು ಎಳೆದಾಡಿದ್ರು!

ಕರೆವ್ವಾ ಮಾದರ ಅನಾಥೆ. ಅವರಿಗೆ ಗ್ರಾಮದ ಖಾಜಾಮೋದ್ಧೀನ್ ಬುಡ್ನೇವರ ಆಶ್ರಯ ನೀಡಿದ್ದಾರೆ ಎನ್ನಲಾಗಿದೆ. ಈಕೆ ಅನ್ಯಕೋಮಿನವರ ಆಶ್ರಯ ಪಡೆದಿದ್ದಕ್ಕೆ ಮತ್ತು ಆಸ್ತಿ ವಿಚಾರಕ್ಕೆ ಈ ರೀತಿ ವರ್ತಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕರೆವ್ವಾ ಹೆಸರಿನಲ್ಲಿರುವ ಒಂದೆಕರೆ ಇಪ್ಪತ್ತು ಗುಂಟೆ ಆಸ್ತಿ ಪಡೆಯಲು ಖಾಜಾಮೋದ್ದಿನ್‌ಗೆ ಸಹ ಸ್ವಸಮಾಜದವರು ಕಿರುಕುಳ ನೀಡಿದ್ದಾರೆ ಎಂಬ ಆರೋಪವಿದೆ. ವೃದ್ದೆಯನ್ನು ಕೆಲ ದಿನಗಳ ಹಿಂದೆ ಅಪಹರಣ ಮಾಡಿದ್ದ ಸ್ವಸಮಾಜದವರು ಮತ್ತೆ ವಾಪಸ್ ಕರೆತಂದು ಬಿಟ್ಟಿದ್ದಾರಂತೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರು: ಮನೆ ಬಿಟ್ಟು ಕೊಡದಿದ್ದಕ್ಕೆ ಅತ್ತೆಯನ್ನೇ ಹೊಡೆದು ಕೊಂದ ಸೊಸೆ

Last Updated : Oct 19, 2022, 6:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.