ETV Bharat / state

ಇದು ಕನ್ನಡ ಕಟ್ಟಾಳು ಪಾಪು ಸಮಾಧಿ: 2 ತಿಂಗಳಲ್ಲಿ ಸ್ಮಾರಕ ಕಟ್ಟುಸುತ್ತೇವೆ ಎಂದವರು ಎಲ್ಲಿ..?

ಅಂದು ಸರ್ಕಾರದ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕೃಷಿ ಸಚಿವ ಬಿ.ಸಿ.ಪಾಟೀಲ ಅಂತಿಮ ನಮನಗಳನ್ನು ಪಡೆದು ಪಾಪು ಅವರನ್ನು ಹಾಡಿ ಹೊಗಳಿ ಸ್ಮಾರಕ ಭವನ ಎರಡು ತಿಂಗಳಲ್ಲಿ ಮಾಡಲಾಗುತ್ತದೆ ಎಂದು ಆಶ್ವಾಸನೆ ನೀಡಿದ್ದರು.

ಪಾಪು ಸಮಾಧಿ
ಪಾಪು ಸಮಾಧಿ
author img

By

Published : Jul 1, 2020, 11:13 AM IST

ರಾಣೆಬೆನ್ನೂರು: ಕನ್ನಡ ನಾಡು-ನುಡಿ, ಸ್ವಾತಂತ್ರ್ಯ ಚಳವಳಿ, ಕರ್ನಾಟಕ ಏಕೀಕರಣ ಹೋರಾಟ, ಗೋಕಾಕ್‌ ಚಳವಳಿ, ನಂಜುಂಡಪ್ಪ ವರದಿ ಜಾರಿ ಮತ್ತು ಪತ್ರಿಕಾ ರಂಗದ ರೂವಾರಿಯಾಗಿದ್ದ ಪಾಟೀಲ ಪುಟ್ಟಪ್ಪ ನಿಧನವಾಗಿ ಮೂರು ತಿಂಗಳ ಕಳೆದರೂ ಅವರ ಸ್ಮಾರಕದ ಕನಸು ಇನ್ನೂ ಕನಸಾಗಿಯೇ ಉಳಿದಿದೆ.

ಇದೇ ನೋಡಿ ಕನ್ನಡ ಕಟ್ಟಾಳು ಪಾಪು ಸಮಾಧಿ

ಹೌದು ವಯೋ ಸಹಜವಾಗಿ ನಿಧನರಾದ ಪಾಟೀಲ ಪುಟ್ಟಪ್ಪ ಅವರನ್ನು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಸ್ವಂತ ಗ್ರಾಮವಾದ ಹಲಗೇರಿಯಲ್ಲಿ ಮಾರ್ಚ 17 ರಂದು ಅಂತ್ಯಕ್ರಿಯೆ ಮಾಡಲಾಗಿತ್ತು. ಅಂದು ಸರ್ಕಾರದ ಪರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕೃಷಿ ಸಚಿವ ಬಿ.ಸಿ.ಪಾಟೀಲ ಅಂತಿಮ ನಮನಗಳನ್ನು ಪಡೆದು ಪಾಪು ಅವರನ್ನು ಹಾಡಿ ಹೊಗಳಿ ಸ್ಮಾರಕ ಭವನವನ್ನು ಎರಡು ತಿಂಗಳಲ್ಲಿ ಮಾಡಲಾಗುತ್ತದೆ ಎಂದು ಆಶ್ವಾಸನೆ ನೀಡಿದ್ದರು. ಆದರೆ, ಪಾಪು ನಿಧನವಾಗಿ ಮೂರು ತಿಂಗಳ ಕಳೆದರೂ ಅವರ ಸಮಾಧಿ ಮಾತ್ರ ಅನಾಥವಾಗಿದೆ. ಪಾಪು ಅವರ ಭಾವಚಿತ್ರ ಅವರ ಸಮಾಧಿ ಮೇಲೆ ಬಿದ್ದಿದ್ದು, ಈ ಕಡೆ ಯಾರು ತಿರುಗಿ ನೋಡದಂತಾಗಿದೆ.

ನಾಡು ನುಡಿಗಾಗಿ ಶ್ರಮಿಸಿ ಹೋರಾಡಿದಂತಹ ಧೀಮಂತ ನಾಯಕನನ್ನು ಸರ್ಕಾರ ಈ ರೀತಿಯಾಗಿ ನಡೆಸಿಕೊಳ್ಳುವುದು ಬೇಸರದ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಹಲಗೇರಿ ಗ್ರಾಮದಲ್ಲಿ ಪಾಪು ಸ್ಮಾರಕವನ್ನು ಮಾಡದಿದ್ದರೆ ಬರುವ ದಿನಗಳಲ್ಲಿ ಹಲಗೇರಿ ಗ್ರಾಮಸ್ಥರು ಸೇರಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮಸ್ಥ ಎಸ್.ಡಿ.ಹಿರೇಮಠ ಎಚ್ಚರಿಕೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.