ಹಾವೇರಿ: ಎತ್ತಿನ ಬಂಡಿ ನೀರಲ್ಲಿ ಸಿಲುಕಿ ಒಂದು ಎತ್ತು ಸಾವನ್ನಪ್ಪಿದ್ದು, ಬಂಡಿಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾದ ಘಟನೆ ಸವಣೂರು ತಾಲೂಕಿನ ತಳ್ಳಳ್ಳಿ ಗ್ರಾಮದ ಬಳಿ ನಡೆದಿದೆ.
ಮಳೆಯಿಂದಾಗಿ ಎಂಟು ದಿನಗಳಿಂದ ರೈಲ್ವೆ ಬ್ರಿಡ್ಜ್ ಕೆಳಗೆ ನಿಂತುಕೊಂಡಿದ್ದ ನೀರಿನಲ್ಲೇ ರೈತ ಬಿತ್ತನೆ ಮಾಡಲು ಜಮೀನಿಗೆ ಎತ್ತಿನಗಾಡಿಯಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಗಾಡಿ ನೀರಿನಲ್ಲಿ ಸಿಲುಕಿ ಮುಂದೆ ಸಾಗಲು ಆಗದೆ ನಿಂಗಜ್ಜ ಕುರಬರ ಎಂಬುವರಿಗೆ ಸೇರಿದ ಎತ್ತು ಸಾವನ್ನಪ್ಪಿದೆ. ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದ ಮೂವರು ಮಹಿಳೆಯರನ್ನ ಪೊಲೀಸರು ರಕ್ಷಿಸಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.