ಹಾವೇರಿ: ನಿಗದಿತ ಮಾರ್ಗ ಬದಲಾಯಿಸಿ ಸಾಗಿಸುತ್ತಿದ್ದ 12 ಸಾವಿರ ಲೀಟರ್ ಬಿಯರ್ ವಶಪಡಿಸಿಕೊಂಡ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ನಡೆದಿದೆ.
![12 ಸಾವಿರ ಲೀಟರ್ ಬಿಯರ್ ವಶ, beer seized in Hirekerur latest news](https://etvbharatimages.akamaized.net/etvbharat/prod-images/5147060_hvr.jpg)
ಮೈಸೂರಿನಿಂದ ಧಾರವಾಡ ಪಾನೀಯ ನಿಗಮಕ್ಕೆ ಮದ್ಯವನ್ನ ಸಾಗಿಸಲಾಗುತ್ತಿತ್ತು. ಆದರೆ ವಾಹನ ಚಾಲಕ ಮಾರ್ಗ ಬದಲಾಯಿಸಿ ಹಿರೇಕೆರೂರು ಮಾರ್ಗವಾಗಿ ಸಾಗಿಸುತ್ತಿದ್ದ ಕಾರಣ ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯವನ್ನ ವಶಪಡಿಸಿಕೊಂಡಿದ್ದಾರೆ.
ಹಿರೇಕೆರೂರಿನಲ್ಲಿ ಉಪಚುನಾವಣೆ ನೀತಿ ಸಂಹಿತೆ ಇರುವ ಕಾರಣ ಹಿರೇಕೆರೂರು ತಾಲೂಕಿನ ಹಳ್ಳೂರು ಗ್ರಾಮದ ಬಳಿ ಮದ್ಯ ವಶಪಡಿಸಿಕೊಳ್ಳಲಾಗಿದೆ. ನೀತಿಸಂಹಿತೆ ಮುಗಿದ ಮೇಲೆ ಮದ್ಯ ಮರಳಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.