ಹಾವೇರಿ: ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಇದುವರೆಗೂ ಯಾರೂ ಧೈರ್ಯ ಮಾಡಿರ್ಲಿಲ್ಲ. ನಮ್ಮ ಸರ್ಕಾರ ಧೈರ್ಯ ಮಾಡಿದೆ ಎಂದು ತೋಟಗಾರಿಕೆ ಸಚಿವ ಡಾ.ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ಡ್ರಗ್ಸ್ ನಿಲ್ಲಿಸುವುದು ತುಂಬಾ ಅಗತ್ಯವಿದೆ. ಇದು ಒಂದು ದಿನದಲ್ಲಿ ನಡೆಯುವುದಲ್ಲ . ಸ್ಕೂಲ್, ಕಾಲೇಜು ಎಲ್ಲಾ ಕಡೆ ಡ್ರಗ್ಸ್ ಜಾಲ ಹಬ್ಬಿದೆ. ಇದೊಂದು ಪ್ಯಾಶನ್ ಆಗೋಗಿದೆ. ಇದನ್ನ ಕಂಟ್ರೋಲ್ ತರೋಕೆ ಕೇಂದ್ರ ಸರ್ಕಾರವೂ ಸಹಕಾರ ನೀಡ್ತಿದೆ. ರಾಜ್ಯ ಸರ್ಕಾರ ಇದನ್ನ ತಡೆಗಟ್ಟೋ ಜವಾಬ್ದಾರಿ ತಗೊಂಡಿದೆ. ನೋಡ್ತಾ ಇರಿ ಇದು ಯಾವ ಮಟ್ಟಕ್ಕೆ ಹೋಗುತ್ತೆ ಅಂತಾ ಎಂದು ಸರ್ಕಾರದ ನಡೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ವಿರುದ್ಧ ಟ್ವೀಟ್ ಮಾಡಿರುವ ವಿಚಾರ ನನಗೆ ಗೊತ್ತಿಲ್ಲ. ನಾನು ಮೂರ್ನಾಲ್ಕು ದಿನಗಳಿಂದ ಪ್ರವಾಸದಲ್ಲಿದ್ದೇನೆ. ಪೇಪರ್ ಓದಲು ಸಮಯ ಸಿಕ್ಕಿಲ್ಲ.ಅರಣ್ಯ ಇಲಾಖೆ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದ್ದೆ. ಸುಮ್ಮನೆ ಏನೋ ಹೇಳಿದರೆ ತಪ್ಪಾಗುತ್ತದೆ. ಯಾರು ಮಾಡಿದ್ದಾರೆ, ಏನು ಮಾಡಿದ್ದಾರೆ ಗೊತ್ತಿಲ್ಲ ಎಂದರು.