ETV Bharat / state

ಕನ್ನಡಕ್ಕೆ ಆಪತ್ತು ತರುವ ಶಕ್ತಿ ವಿಶ್ವದಲ್ಲೇ ಹುಟ್ಟಿಲ್ಲ, ಹುಟ್ಟುವುದೂ ಇಲ್ಲ: ಬಸವರಾಜ್ ಬೊಮ್ಮಾಯಿ ಸ್ಪಷ್ಟ ನುಡಿ - ಕನ್ನಡಕ್ಕೆ ಆಪತ್ತು ತರುವ ಶಕ್ತಿ ವಿಶ್ವದಲ್ಲೇ ಹುಟ್ಟಿಲ್ಲ

ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಗೊಂಡಿದೆ -ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ - ಲಿಂಗೈಕ್ಯರಾದ ಸಿದ್ದೇಶ್ವರ ಶ್ರೀಗಳಿಗೆ ಮೌನಾಚರಣೆ ಸಲ್ಲಿಸುವ ಮೂಲಕ ಗೌರವ

Launch of Kannada Sahitya Conference
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
author img

By

Published : Jan 6, 2023, 8:14 PM IST

ಸೂರ್ಯ ಚಂದ್ರರು ಇರುವವರೆಗೂ ಶತ ಶತಮಾನಗಳಿಗೂ ಕನ್ನಡ ಭಾಷೆ ಶ್ರೀಮಂತ ಭಾಷೆವಾಗಿರುತ್ತದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.

ಹಾವೇರಿ : ಕನ್ನಡಕ್ಕೆ ಆಪತ್ತು ತರುವ ಯಾವುದೇ ಶಕ್ತಿ ವಿಶ್ವದಲ್ಲಿ ಹುಟ್ಟಿಲ್ಲ, ಹುಟ್ಟುವುದೂ ಇಲ್ಲಾ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ. ಏಲಕ್ಕಿ ನಗರಿ ಎಂದೇ ಪ್ರಸಿದ್ದಿಗಳಿಸಿರುವ ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ತವರು ಜಿಲ್ಲೆ, ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಗೊಂಡಿದೆ.

ಇಂದು ಹಾವೇರಿಯಲ್ಲಿ ಆರಂಭವಾದ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸೂರ್ಯ ಚಂದ್ರರು ಇರುವವರೆಗೂ ಶತ ಶತಮಾನಗಳಿಗೂ ಕನ್ನಡ ಭಾಷೆ ಶ್ರೀಮಂತ ಭಾಷೆಯಾಗಿದೆ ಎಂದು ಹೊಗಳಿದ್ದು, ಕರ್ನಾಟಕ ಮಾತೆಗೆ ಜೈಕಾರ ಹಾಕುವ ಮೂಲಕ ತಮ್ಮ ಕನ್ನಡಾಭಿಮಾನವನ್ನು ಮೆರೆದರು. ಭಾರತ ದೇಶದಲ್ಲಿ ಕನ್ನಡಕ್ಕೆ ಮಾತ್ರ ಎಂಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿವೆ. ದೇಶದ ಬೇರೆ ಯಾವ ಭಾಷೆಗೂ ಸಹ ಇಷ್ಟು ಜ್ಞಾನಪೀಠ ಪ್ರಶಸ್ತಿಗಳು ದೊರೆತಿಲ್ಲ ಎಂದು ಸಿಎಂ ಬೊಮ್ಮಾಯಿ ಹೆಮ್ಮೆ ವ್ಯಕ್ತಪಡಿಸಿದರು.

ಒಂದು ಭಾಷೆ ಒಂದು ಸಂಸ್ಕೃತಿ ಬೆಳೆಯಬೇಕು ಎಂದರೆ ಇದುವರೆಗೆ ನಡೆದುಕೊಂಡು ಬಂದ ದಾರಿಯ ಸಿಂಹಾವಲೋಕನ ಮಾಡಬೇಕಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು. ಆತ್ಮಾವಲೋಕನ ಮಾಡಿಕೊಂಡಾಗ ಅದು ಮುಂದಿನ ದಾರಿಯನ್ನು ನಿರ್ಧರಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ವಿವಿಧ ಗಣ್ಯರು ಪಾಲ್ಗೊಂಡಿದ್ದರು. ಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೊದಲು ಸೋಮವಾರ ಲಿಂಗೈಕ್ಯರಾದ ಸಿದ್ದೇಶ್ವರ ಶ್ರೀಗಳಿಗೆ ಮೌನಾಚರಣೆ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು.

ಇಂದಿನಿಂದ 3 ದಿನ ಅಕ್ಷರ ಹಬ್ಬದ ರಂಗು : ಇಂದಿನಿಂದ ಜನವರಿ 8ರ ವರೆಗೆ ಕನ್ನಡ ಸಾಹಿತ್ಯ ಜಾತ್ರೆ ನಡೆಯಲಿದ್ದು, ಮಧುವಣಗಿತ್ತಿಯಂತೆ ಎಲಕ್ಕಿ ನಗರಿ ಹಾವೇರಿ ಅದ್ದೂರಿಯಾಗಿ ಅಲಂಕಾರಗೊಂಡಿದೆ. ಇದುವರೆಗೂ ರಾಜ್ಯದಲ್ಲಿ ನಡೆದಿದ್ದ ಕನ್ನಡ ಸಾಹಿತ್ಯ ಸಮ್ಮೇಳನಕ್ಕಿಂತ ಈ ಬಾರಿ ನಡೆಯುತ್ತಿರುವ ಅಕ್ಷರ ಹಬ್ಬ ಬಹಳ ವಿಶೇಷ ಮತ್ತು ತನ್ನದೇ ಆದ ಮತ್ತೊಂದು ಶೈಲಿಯಲ್ಲಿ ನಡೆಯುತ್ತಿರುವುದು ಕನ್ನಡಿಗರಿಗೆ ಹೆಮ್ಮೆ ತರುವಂತಹದ್ದಾಗಿದೆ. ಊಟದ ವ್ಯವಸ್ಥೆ, ಪ್ರಧಾನ ವೇದಿಕೆ, ಸಮಾನಂತರ ವೇದಿಕೆ ಮತ್ತು ಪ್ರದರ್ಶನ ಮಳಿಗೆ ಹಾಗೂ ಪುಸ್ತಕ ವಾಣಿಜ್ಯ ಮಳಿಗೆಗಳು ಒಂದೇ ಕಡೆ ಇರುವ ಕನ್ನಡ ಸಾಹಿತ್ಯ ಸಮ್ಮೇಳನ ಇದಾಗಿದೆ.

ಸ್ಥಳೀಯ ವಿಶೇಷ ತಿನಿಸುಗಳಿಗೆ ಒತ್ತು : ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರುವ ಜನರಿಗೆ ಶುಚಿ ಹಾಗೂ ರುಚಿಯಾದ ಊಟೋಪಹಾರದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನದ ಸಮಯದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬಹುದು. ಹಾಗಾಗಿ, ಯಾರೊಬ್ಬರಿಗೂ ಕೊರತೆ ಆಗದಂತೆ ಮತ್ತು ಡಷ್ಟೇ ಜನರು ಬಂದರೂ ಅವರನ್ನು ನಿಯಂತ್ರಿಸಲು ಊಟದ ಕೌಂಟರ್​ಗಳನ್ನು ಮತ್ತು ಕುಡಿಯುವ ನೀರನ ವ್ಯವಸ್ಥೆ ಮಾಡಲಾಗಿದೆ. ಸ್ಥಳೀಯ ತಿನಿಸುಗಳಿಗೆ ಹೆಚ್ಚು ಒತ್ತು ಕೊಟ್ಟು ಊಟದ ಮೆನು ಸಿದ್ದಪಡಿಸಲಾಗಿದೆ. ಊಟದ ವ್ಯವಸ್ಥೆ ನಿರ್ವಹಣೆಗಾಗಿ ಅಧಿಕಾರಿಗಳು, ಪಿಡಿಒಗಳು, ಬಿಲ್​ ಕಲೆಕ್ಟರ್​ ಸೇರಿದಂತೆ ವಿವಿಧ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ :ಹಾವೇರಿ 86ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ: ಗಮನ ಸೆಳೆದ ಕಲಾ ಪ್ರದರ್ಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.