ETV Bharat / state

ಲಾಕ್​ಡೌನ್​ಗೆ ಡೋಂಟ್​ ಕೇರ್​... ಜಾನುವಾರು ಮಾರುಕಟ್ಟೆಯಲ್ಲಿ ಜನಜಂಗುಳಿ - ಹಾವೇರಿ ಸುದ್ದಿ

ಜಾನುವಾರು ಮಾರುಕಟ್ಟೆಯಲ್ಲಿ ಸಾವಿರಾರು ರೈತರು, ದಲ್ಲಾಲಿಗಳು ಸೇರಿದ್ದರು. ಇವರಲ್ಲಿ ಯಾರೂ ಕೂಡ ನಿಯಮ ಪಾಲಿಸಿಲ್ಲ. ಜಾನುವಾರು ಮಾರುಕಟ್ಟೆ ಪ್ರವೇಶಿಸುವ ರೈತರಿಗೆ ಸ್ಕ್ರೀನಿಂಗ್ ಇಲ್ಲ, ಮಾಸ್ಕ್ ಮತ್ತು ಸಾಮಾಜಿಕ ಅಂತರ ಇದ್ಯಾವುದರ ರೈತರು ಜಾನುವಾರುಗಳ ಮಾರಾಟ ಮತ್ತು ಖರೀದಿಯಲ್ಲಿ ನಿರತರಾಗಿದ್ದರು.

Haveri
ಹಾವೇರಿ
author img

By

Published : Jul 16, 2020, 7:43 PM IST

ಹಾವೇರಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಅಧಿಕವಾಗುತ್ತಿದೆ. ತಾಲೂಕು ಕೇಂದ್ರಗಳಿಗೆ ಮೀಸಲಾಗಿದ್ದ ಕೊರೊನಾ ಇದೀಗ ಜಿಲ್ಲಾ ಕೇಂದ್ರಕ್ಕೆ ಸಹ ಕಾಲಿಟ್ಟಿದೆ. ಆದರೂ ಸಹ ಸಾರ್ವಜನಿಕರು ಯಾವುದೇ ಮುಂಜಾಗ್ರತಾ ಕ್ರಮಗಳಿಲ್ಲದೆ ಜಾನುವಾರು ಮಾರುಕಟ್ಟೆಯಲ್ಲಿ ವ್ಯವಹರಿಸುತ್ತಿದ್ದರು.

ಜಾನುವಾರು ಮಾರುಕಟ್ಟೆಯಲ್ಲಿ ಜನಜಂಗುಳಿ

ಜಾನುವಾರು ಮಾರುಕಟ್ಟೆಯಲ್ಲಿ ಸಾವಿರಾರು ರೈತರು, ದಲ್ಲಾಲಿಗಳು ಸೇರಿದ್ದು ಯಾರು ನಿಯಮ ಪಾಲಿಸುತ್ತಿಲ್ಲ. ಜಾನುವಾರು ಮಾರುಕಟ್ಟೆ ಪ್ರವೇಶಿಸುವ ರೈತರಿಗೆ ಸ್ಕ್ರೀನಿಂಗ್ ಇಲ್ಲ, ಮಾಸ್ಕ್ ಮತ್ತು ಸಾಮಾಜಿಕ ಅಂತರ ಇರಲಿಲ್ಲ. ಇದ್ಯಾವುದರ ಅರಿವೇ ಇಲ್ಲದೆ, ರೈತರು ಜಾನುವಾರುಗಳ ಮಾರಾಟ-ಖರೀದಿಯಲ್ಲಿ ನಿರತರಾಗಿದ್ದರು. ಇಲ್ಲಿನ ಎಪಿಎಂಸಿಯು ಕಾಳುಕಡಿ ಮತ್ತು ತರಕಾರಿ ಮಾರುಕಟ್ಟೆಗೆ ಬ್ಯಾರಿಕೇಡ್ ಹಾಕಿ ಜನದಟ್ಟಣೆ ನಿಭಾಯಿಸುತ್ತಿದೆ.

ಆದರೆ ಅದರ ಪಕ್ಕದಲ್ಲಿರುವ ಜಾನುವಾರು ಮಾರುಕಟ್ಟೆಗೆ ಮಾತ್ರ ಯಾವುದೇ ಬ್ಯಾರಿಕೇಡ್ ಇಲ್ಲ. ಮಾರುಕಟ್ಟೆಗೆ ಹಾವೇರಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ದಲ್ಲಾಲಿಗಳು ರೈತರು ಆಗಮಿಸುತ್ತಾರೆ. ಹೀಗಾದರೆ ರೋಗ ಇನ್ನಷ್ಟು ತೀಕ್ಷ್ಣವಾಗಿ ಹರಡುವ ಆತಂಕವನ್ನ ಸ್ಥಳೀಯರು ವ್ಯಕ್ತಪಡಿಸುತ್ತಿದ್ದಾರೆ. ಯಾರಾದರೊಬ್ಬರಿಗೆ ಕೊರೊನಾ ಬಂದು ಮಾರುಕಟ್ಟೆ ಸೀಲ್​ಡೌನ್ ಮಾಡುವ ಮುನ್ನ ಕೊರೊನಾ ನಿಯಂತ್ರಣದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.