ಹಾವೇರಿ: ಕೊರೊನಾ ವೈರಸ್ ಭೀತಿ ಆರಂಭವಾದಾಗಿನಿಂದ ಜಿಲ್ಲೆಗೆ ವಿದೇಶ ಮತ್ತು ನೆರೆ, ರಾಜ್ಯ ಜಿಲ್ಲೆಗಳಿಂದ ಸುಮಾರು 11 ಸಾವಿರ ಜನ ಬಂದಿದ್ದಾರೆ. ಅವರೆಲ್ಲರನ್ನು ತಪಾಸಣೆಗೆ ಒಳಪಡಿಸಿ ಕ್ವಾರಂಟೈನ್ ಮಾಡಲಾಗಿದೆ ಎಂದು ಹಾವೇರಿ ಸಿಇಒ ರಮೇಶ್ ದೇಸಾಯಿ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿ, ಜಿಲ್ಲಾಡಳಿತದ ಈ ಕ್ರಮದಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಜಿಲ್ಲಾಡಳಿತದ ಕ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಸರ್ಕಾರದ ಆದೇಶದಂತೆ ಎರಡು ಐಸೋಲೇಶನ್, ಎರಡು ಫೀವರ್ ಕ್ಲಿನಿಕ್ ಮತ್ತು ಎರಡು ಕ್ವಾರಂಟೈನ್ ವಾರ್ಡ್‌ಗಳನ್ನು ಸಿದ್ದಪಡಿಸಿ ಇಟ್ಟುಕೊಳ್ಳಲಾಗಿದೆ. ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು ಅಶಾ ಕಾರ್ಯಕರ್ತೆಯರ ಸಹಾಯ ಪಡೆಯಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಮಾಹಿತಿ ಕಲೆಹಾಕಲು ಬಂದಾಗ ಅವರಿಗೆ ಸಹಕರಿಸುವಂತೆ ರಮೇಶ ಮನವಿ ಮಾಡಿದರು.